Monday, September 22, 2025

ನಮ್ಮ ಮೆಟ್ರೋ ಹಳದಿ ಮಾರ್ಗದ 11 ನಿಲ್ದಾಣದಲ್ಲಿ ಪಾರ್ಕಿಂಗ್‌ ಸೌಲಭ್ಯ, ದರ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ಮೆಟ್ರೋ ಹೊಸದಾಗಿ ಆರಂಭವಾಗಿರುವ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳ ಪೈಕಿ 11 ನಿಲ್ದಾಣಗಳಲ್ಲಿ ಮಾತ್ರ ವಾಹನ ಪಾರ್ಕಿಂಗ್‌ ಸೌಲಭ್ಯವಿದೆ. ಎಲ್ಲಾ ನಿಲ್ದಾಣಗಳಲ್ಲಿಯೂ ಈ ಸೌಲಭ್ಯ ಕಲ್ಪಿಸಬೇಕು ಜತೆಗೆ ವಾಹನ ನಿಲುಗಡೆ ಸಾಮರ್ಥ್ಯವನ್ನು ವಿಸ್ತರಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಬೆಂಗಳೂರಿನಲ್ಲಿ ನಿತ್ಯ 10 ಲಕ್ಷಕ್ಕೂ ಅಧಿಕ ಮಂದಿ ನಮ್ಮ ಮೆಟ್ರೋ ರೈಲುಗಳಲ್ಲಿ ಸಂಚರಿಸುತ್ತಾರೆ. ಈ ಪೈಕಿ ಹಳದಿ ಮಾರ್ಗದಲ್ಲಿ 60 ರಿಂದ 70 ಸಾವಿರ ಮಂದಿ ಪ್ರಯಾಣ ಮಾಡುತ್ತಾರೆ. ಸಾವಿರಾರು ಮಂದಿ ಮನೆಗಳಿಂದ ನಿಲ್ದಾಣಕ್ಕೆ ಕಾರ್‌, ಬೈಕಿನಲ್ಲಿ ಬಂದು ಅಲ್ಲಿಂದ ಮೆಟ್ರೋ ರೈಲುಗಳಲ್ಲಿ ಸಂಚಾರ ನಡೆಸುತ್ತಾರೆ. ಸದ್ಯ ಹಳದಿ ಮಾರ್ಗದ 11 ನಿಲ್ದಾಣಗಳಲ್ಲಿ ಮಾತ್ರ ವಾಹನ ನಿಲುಗಡೆ ಸೌಲಭ್ಯವಿದೆ. ಎಲೆಕ್ಟ್ರಾನಿಕ್‌ ಸಿಟಿ ನಿಲ್ದಾಣದಲ್ಲಿ 800 ವಾಹನ ನಿಲ್ಲಿಸುವ ಅತಿ ದೊಡ್ಡ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ನಿಲುಗಡೆಯಲ್ಲಿ ಟು ವ್ಹೀಲರ್‌ ಬೆಲೆ ಹದಿನೈದು ರೂಪಾಯಿಗಳಿದ್ದರೆ, ಫೋರ್‌ ವ್ಹೀಲರ್‌ ಬೆಲೆ ಮೂವತ್ತು ರೂಪಾಯಿ ಇದೆ.

ನಮ್ಮ ಮೆಟ್ರೋ ಹಳದಿ ಮಾರ್ಗದ ಯಾವೆಲ್ಲಾ ನಿಲ್ದಾಣಗಳಲ್ಲಿ ಪಾರ್ಕಿಂಗ್ ಲಭ್ಯ?

ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ

ರಾಗಿಗುಡ್ಡ

ಬಿಟಿಎಂ ಲೇಔಟ್

ಸೆಂಟ್ರಲ್ ಸಿಲ್ಕ್ ಬೋರ್ಡ್

ಬೊಮ್ಮನಹಳ್ಳಿ

ಹೊಂಗಸಂದ್ರ

ಕುಡ್ಲು ಗೇಟ್

ಹೊಸ ರಸ್ತೆ

ಎಲೆಕ್ಟ್ರಾನಿಕ್ ಸಿಟಿ

ಇನ್ಫೋಸಿಸ್ ಫೌಂಡೇಶನ್ ಕೊನಪ್ಪನ ಅಗ್ರಹಾರ

ಬಯೋಕಾನ್ ಹೆಬ್ಬಗೋಡಿ

ಇದನ್ನೂ ಓದಿ