Wednesday, October 8, 2025

ನಿನ್ನೆ ಸುರಿದ ಮಳೆಗೆ ಬೆಂಗಳೂರು ಹೈರಾಣು : ಮರ ಬಿದ್ದು ಕಾರ್‌-ಬೈಕ್‌ ಜಖಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ರಾಜಾಜಿನಗರದ 4ನೇ ಬ್ಲಾಕ್​​ನಲ್ಲಿ ಎರಡು ಮನೆಗಳ ಮೇಲೆ ಮರ ಬಿದ್ದಿದೆ. ಚಂದ್ರಮ್ಮ, ಪೀಟರ್​ ಎಂಬುವರ ಮನೆಗಳ ಮೇಲೆ ಬೃಹತ್ ಮರ ಬಿದ್ದು ಹಾನಿ ಸಂಭವಿಸಿದೆ.

ಮರ ಬಿದ್ದು 5 ಕಾರು, ಟಾಟಾ ಏಸ್​ ವಾಹನ, 3-4 ಬೈಕ್​ಗಳು ಜಖಂಗೊಂಡಿವೆ. ಮನೆಗಳ ಮೇಲೆ ಮರ ಬಿದ್ದ ಪರಿಣಾಮ 2 ಕುಟುಂಬಗಳಿಗೆ ದಿಗ್ಬಂಧನ ಹಾಕಿದಂತಾಗಿ ಮನೆಯಿಂದ ಹೊರಬರಲಾಗದೆ ಪರದಾಟ ನಡೆಸಿದರು.

error: Content is protected !!