Friday, September 12, 2025

ಕನ್ನಡತಿ ಶ್ರೀಲೀಲಾರನ್ನು ರಿಪ್ಲೇಸ್‌ ಮಾಡಿದ ಮತ್ತೋರ್ವ ಕನ್ನಡತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಜಿತ್ ಕುಮಾರ್ ನಟಿಸಿದ ಕೊನೆಯ ಚಿತ್ರ ಗುಡ್ ಬ್ಯಾಡ್ ಅಗ್ಲಿ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ್ದು, ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ.

ಈ ಚಿತ್ರ ಏಪ್ರಿಲ್ 10ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ನಟ ಅಜಿತ್ ಕುಮಾರ್ ಗ್ಯಾಂಗ್‌ಸ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ. ನಟಿ ತ್ರಿಶಾ ಕೃಷ್ಣನ್ ಅವರ ಜೊತೆ ನಟಿಸಿದ್ದಾರೆ. ಅಜಿತ್ ತಮ್ಮ ಮುಂದಿನ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಇರಲಿದೆ. ಈ ಚಿತ್ರದ ನಾಯಕಿಯರ ಬಗ್ಗೆ ಚರ್ಚೆ ಜೋರಾಗಿದೆ.

Srinidhi Shetty Regrets Doing Yash's KGF?

ಸದ್ಯ ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ, ನಟಿ ಶ್ರೀಲೀಲಾ ಅಜಿತ್ ಕುಮಾರ್ ಅವರ 64ನೇ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಪಾತ್ರ ಶ್ರೀನಿಧಿ ಶೆಟ್ಟಿಗೆ ಹೋಗಿದೆ ಎಂಬ ವರದಿಗಳೂ ಇವೆ. ಈ ಮಾಹಿತಿ ಎಷ್ಟರ ಮಟ್ಟಿಗೆ ನಿಜವೋ ತಿಳಿದಿಲ್ಲ. ಈ ಚಿತ್ರದ ಬಗ್ಗೆ ಅಧಿಕೃತ ಘೋಷಣೆಗಳು ಆಗಸ್ಟ್ 2025ರ ಅಂತ್ಯದ ವೇಳೆಗೆ ಹೊರಬೀಳಲಿವೆ ಎಂದು ಹೇಳಲಾಗುತ್ತಿದೆ.

It's all like a dream: 'KGF' star Srinidhi Shetty on her nascent journey in  cinema

ನಿರ್ದೇಶಕ ಅಧಿಕ್ ರವಿಚಂದ್ರನ್ ಅವರು ಈಗಾಗಲೇ ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಅವರು ಅಜಿತ್ ಜೊತೆ ಕೈ ಜೋಡಿಸಿದ್ದು, ದೊಡ್ಡ ಯಶಸ್ಸನ್ನು ನಿರೀಕ್ಷಿಸಲಾಗಿದೆ. ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅಜಿತ್ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಅಜಿತ್ ಕುಮಾರ್- ಅನಿರುದ್ಧ್ ಈಗಾಗಲೇ ‘ವಿದಮುಯರ್ಚಿ’, ‘ವಿವೇಗಂ’ ಮತ್ತು ‘ವೇದಾಲಂ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ