Thursday, September 11, 2025

ಕರ್ತವ್ಯ ನಿಮಿತ್ತ ಕಲಬುರಗಿಗೆ ಬಂದಿದ್ದ ಅಬಕಾರಿ ಇಲಾಖೆ ಪಿಎಸ್ಐ ಹೃದಯಾಘಾತದಿಂದ ಸಾವು

ಹೊಸದಿಗಂತ ವರದಿ ಕಲಬುರಗಿ:

ಹೃದಯಾಘಾತದಿಂದ ಅಬಕಾರಿ ಇಲಾಖೆಯ ಪಿಎಸ್ಐ ನಿಧನ ಹೊಂದಿರುವ ಘಟನೆ ಕಲಬುರಗಿ ನಗರದ ನಾಗನಹಳ್ಳಿ ಪೋಲಿಸ್ ತರಬೇತಿ ಕೇಂದ್ರದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಂಜುನಾಥ (೪೬) ನಿಧನ ಹೊಂದಿರುವ ಅಬಕಾರಿ ಇಲಾಖೆಯ ಪಿಎಸ್ಐ ಆಗಿದ್ದು, ತರಬೇತಿ ನಿಮಿತ್ತವಾಗಿ ಕಲಬುರಗಿ ಕೇಂದ್ರಕ್ಕೆ ಬಂದಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ನಗರದ ಜಯದೇವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ