Tuesday, October 14, 2025

ಕಾರು ಚಾಲಕನ ಮನೆಗೆ ಭೇಟಿ ನೀಡಿ, ಬಿಸಿ ಬಿಸಿ ತಿಂಡಿ ಸವಿದ ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ  ಪಕ್ಷ ಸಂಘಟನೆಗೆ ಮುಂದಾಗಿದ್ದು, ಕೊಪ್ಪಳ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ತಮ್ಮ ಚಾಲಕನ ಮನೆಗೆ ಭೇಟಿ ನೀಡಿದ್ದು, ಬಿಸಿ ಬಿಸಿ ತಿಂಡಿ ಸವಿದಿದ್ದಾರೆ.

ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಕಾರಟಗಿ ತಾಲೂಕು ಸಿದ್ದಾಪುರ ಗ್ರಾಮದಲ್ಲಿರುವ ಚಾಲಕ ಮಂಜುನಾಥ್ ಅವರ ವಿಜಯ ಕೇಸರಿ ನಿಲಯಕ್ಕೆ ಭೇಟಿ ನೀಡಿದ್ರು. ಇದೇ ವೇಳೆ ಚಾಲಕ ಮನೆಯಲ್ಲೇ ಉಪಹಾರ ಕೂಡ ಸೇವಿಸಿದ್ದಾರೆ.

error: Content is protected !!