Thursday, September 11, 2025

ದಕ್ಷಿಣ ಕನ್ನಡದಲ್ಲಿ ಕಂಡುಕೇಳರಿಯದ ರಣ ಭೀಕರ ಬಿರುಗಾಳಿ: ಕ್ಷಣಾರ್ಧದಲ್ಲಿ ಕೃಷಿ ಭೂಮಿ ಚಿಂದಿ

ಹೊಸದಿಗಂತ ವರದಿ ದಕ್ಷಿಣ ಕನ್ನಡ:

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಪರಿಸರದಲ್ಲಿ ಆ.19ರಂದು ಮುಂಜಾನೆ 5 ಗಂಟೆಗೆ ಕಂಡುಕೇಳರಿದ ರೀತಿ ಬೀಸಿದ ಭೀಕರ ಗಾಳಿಯಿಂದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಸವಣೂರು ಮೆಸ್ಕಾಂ ಉಪವಿಭಾಗದ ಸವಣೂರು ಗ್ರಾಮದ ಕೆಡೆಂಜಿ, ಆರೇಲ್ತಡಿ, ಕುದ್ಮನಮಜಲು ಪಟ್ಟೆ ಮಡಕೆ, ಕುದ್ಮಾರು ಗ್ರಾಮದ ಅನ್ಯಾಡಿ ಪರಿಸರದಲ್ಲಿ ಮರ ಬಿದ್ದು ಸುಮಾರು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಆರೇಲ್ತಡಿ ಕೊರಗಜ್ಜನ ಕಟ್ಟೆ, ದೈವಸ್ಥಾನದ ಪ್ರದೇಶ, ಹಲವರ ವಾಸದ ಮನೆಗಳು, ಅಡಿಕೆ ತೋಟ, ತೆಂಗಿನ ಮರಗಳು ಸೇರಿದಂತೆ ಲಕ್ಷಾಂತರ ನಷ್ಟ ಉಂಟಾಗಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಇದನ್ನೂ ಓದಿ