Thursday, September 4, 2025

ಶೋನಲ್ಲಿ ಸಲ್ಮಾನ್‌ ಕರೆದಿದ್ದಕ್ಕೆ ಕೆಫೆಯಲ್ಲಿ ಶೂಟೌಟ್: ಬಿಷ್ಣೋಯ್ ಗ್ಯಾಂಗ್‌ ಆಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಹಾಸ್ಯ ನಟ ಕಪಿಲ್ ಶರ್ಮಾ ಅವರ ಕೆನಡಾದ ಕೆಫೆ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಆಡಿಯೋವೊಂದು ವೈರಲ್ ಆಗಿದೆ.

ಬಿಷ್ಣೋಯ್ ಗ್ಯಾಂಗ್‌ನ ಹ್ಯಾರಿ ಬಾಕ್ಸರ್ ಎಂಬಾತನ ಆಡಿಯೋ ಇದಾಗಿದ್ದು, ನಟ ಸಲ್ಮಾನ್ ಖಾನ್‌ನ್ನು ಕೆಫೆ ಉದ್ಘಾಟನೆಗೆ ಆಹ್ವಾನಿಸಿದಕ್ಕಾಗಿ ಶೂಟೌಟ್ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ವೈರಲ್ ಆದ ಆಡಿಯೋದಲ್ಲಿ, ಕಪಿಲ್ ಶರ್ಮಾ ತಮ್ಮ ಕೆಫೆ ಉದ್ಘಾಟನೆಗೆ ಸಲ್ಮಾನ್ ಖಾನ್ ಅವರನ್ನು ಆಹ್ವಾನಿಸಿದ್ದಕ್ಕಾಗಿ ಗುಂಡಿನ ದಾಳಿ ನಡೆಸಲಾಗಿದೆ. ಅದಲ್ಲದೇ ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡುವ ಯಾವುದೇ ನಿರ್ದೇಶಕ, ನಿರ್ಮಾಪಕ ಅಥವಾ ಕಲಾವಿದರ ಎದೆಗೆ ಗುಂಡು ಹಾರಿಸುತ್ತೇವೆ.

ನಾವು ಯಾರನ್ನೂ ಬಿಡುವುದಿಲ್ಲ. ಸಲ್ಮಾನ್ ಖಾನ್ ಜೊತೆ ಇರುವವರನ್ನು ಕೊಲ್ಲಲು ನಾವು ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇವೆ. ನೆನಪಿರಲಿ, ನಿಮ್ಮ ಸಾವಿಗೆ ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ