ಪ್ರವಾಸಕ್ಕೆಂದು ನೇಪಾಳಕ್ಕೆ ಹೋಗಿದ್ದ ಹಾವೇರಿ ಜಿಲ್ಲೆಯ 12 ಮಂದಿ ಸೇಫ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪ್ರವಾಸಕ್ಕೆಂದು ನೇಪಾಳಕ್ಕೆ ಹೋಗಿದ್ದ ಹಾವೇರಿ ಜಿಲ್ಲೆಯ 12 ಮಂದಿ ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭೀಕರ ಪ್ರವಾಹದಲ್ಲಿ 177ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಬೆಂಗಳೂರಿನ ಎಂಟು ಮಂದಿ ನಾಪತ್ತೆಯಾಗಿದ್ದಾರೆ. ಹಾವೇರಿಯಿಂದ ಪ್ರವಾಸಕ್ಕೆ ಹೋಗಿದ್ದವರು ನೇಪಾಳದಿಂದ ಕರೆ ಮಾಡಿದ್ದು, ನಾವೆಲ್ಲರೂ ಸೇಫ್‌ ಆಗಿದ್ದೇವೆ ಎಂದು ಹೇಳಿದ್ದಾರೆ. ಶಿವನಗೌಡ ಎನ್ನುವವರು ಕರೆ ಮಾಡಿದ್ದು, ರಟ್ಟಿಹಳ್ಳಿಯಿಂದ ನೇಪಾಳ ನೋಡಲು ಬಂದಿದ್ದೆವು. ಇಲ್ಲಿ ಪ್ರವಾಹ ಆಗಿದೆ. ಆದರೆ ನಾವು ಪ್ರವಾಹ ಸ್ಥಳದಲ್ಲಿ ಐವತ್ತು ಕಿ.ಮೀ ದೂರ ಇದ್ದೇವೆ ಎಂದಿದ್ದಾರೆ. … Continue reading ಪ್ರವಾಸಕ್ಕೆಂದು ನೇಪಾಳಕ್ಕೆ ಹೋಗಿದ್ದ ಹಾವೇರಿ ಜಿಲ್ಲೆಯ 12 ಮಂದಿ ಸೇಫ್‌!