ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಸಕ್ಕೆಂದು ನೇಪಾಳಕ್ಕೆ ಹೋಗಿದ್ದ ಹಾವೇರಿ ಜಿಲ್ಲೆಯ 12 ಮಂದಿ ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭೀಕರ ಪ್ರವಾಹದಲ್ಲಿ 177ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಬೆಂಗಳೂರಿನ ಎಂಟು ಮಂದಿ ನಾಪತ್ತೆಯಾಗಿದ್ದಾರೆ.
ಹಾವೇರಿಯಿಂದ ಪ್ರವಾಸಕ್ಕೆ ಹೋಗಿದ್ದವರು ನೇಪಾಳದಿಂದ ಕರೆ ಮಾಡಿದ್ದು, ನಾವೆಲ್ಲರೂ ಸೇಫ್ ಆಗಿದ್ದೇವೆ ಎಂದು ಹೇಳಿದ್ದಾರೆ. ಶಿವನಗೌಡ ಎನ್ನುವವರು ಕರೆ ಮಾಡಿದ್ದು, ರಟ್ಟಿಹಳ್ಳಿಯಿಂದ ನೇಪಾಳ ನೋಡಲು ಬಂದಿದ್ದೆವು. ಇಲ್ಲಿ ಪ್ರವಾಹ ಆಗಿದೆ. ಆದರೆ ನಾವು ಪ್ರವಾಹ ಸ್ಥಳದಲ್ಲಿ ಐವತ್ತು ಕಿ.ಮೀ ದೂರ ಇದ್ದೇವೆ ಎಂದಿದ್ದಾರೆ.
ವ್ಯಾಪಾರಸ್ಥರು, ಗುತ್ತಿಗೆದಾರರು ಹಾಗೂ ಕುಟುಂಬಗಳು ಪ್ರವಾಸ ಕೈಗೊಂಡಿದ್ದು, ಕೆಲವೇ ಹೊತ್ತಿನಲ್ಲಿ ಸೋನಾಲಿಗೆ ಬಂದು ತಲುಪುತ್ತೇವೆ. ಸದ್ಯದಲ್ಲೇ ಕರ್ನಾಟಕಕ್ಕೆ ಬರುತ್ತೇವೆ. ಫೋನ್ ರೀಚ್ ಆಗದಿದ್ದರೆ ಯಾರೂ ಗಾಬರಿಯಾಗಬೇಡಿ ಎಲ್ಲರೂ ಸುರಕ್ಷಿತವಾಗಿ ಕರ್ನಾಟಕಕ್ಕೆ ಬರುತ್ತೇವೆ ಎಂದಿದ್ದಾರೆ.
ನೇಪಾಳದ ಟಿಬೆಟ್‌ನಲ್ಲಿ ಬುಧವಾರದಂದು ಹಠಾತ್ ಸಂಭವಿಸಿದ ಭಾರಿ ಪ್ರವಾಹದಿಂದ ಇದುವರೆಗೆ 177ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವರದಿಯಾಗಿದೆ. ವಿದೇಶಿಯರು ಮತ್ತು ಯಾತ್ರಿಕರು ಸೇರಿದಂತೆ 1300 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಇಲ್ಲಿನ ಬಹುತೇಕ ಜಿಲ್ಲೆಗಳು ಸಂಪರ್ಕ ಕಳೆದುಕೊಂಡಿವೆ. ದುರಂತದಲ್ಲಿ ಬೆಂಗಳೂರಿನ 8 ಜನ ಸಿಲುಕಿದ್ದಾರೆ. ಸಾವಿಗೀಡಾದವರ ಮಾಹಿತಿ ಇಲ್ಲ. ಸಿಲುಕಿದವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇವೆ ಎಂದು ಈಗಾಗಲೇ ಡಿಸಿಎಂ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.



