Saturday, August 30, 2025

216 ಗಂಟೆಗಳ ನಿರಂತರ ಭರತನಾಟ್ಯ: ಗೋಲ್ಡನ್​ ಬುಕ್​ ಆಫ್ ವರ್ಲ್ಡ್​ ರೆಕಾರ್ಡ್​ ಬರೆದ ವಿದುಷಿ ದೀಕ್ಷಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರಂತರ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿ ವಿದೂಶಿ ದೀಕ್ಷಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಶನಿವಾರ ಸಂಜೆ 3:30ಕ್ಕೆ ಹೊಸ ವಿಶ್ವದಾಖಲೆಯೊಂದಿಗೆ ಸತತ 9 ದಿನಗಳ ತನ್ನ ನೃತ್ಯ ಪ್ರದರ್ಶನವನ್ನು ಅವರು ಪೂರ್ಣಗೊಳಿಸಿದರು.

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ವಿದುಷಿ ದೀಕ್ಷಾ ವಿ. ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಸ್ನಾತಕೋತ್ತರ ಕಾಲೇಜು ಸಭಾಂಗಣದಲ್ಲಿ ಕಳೆದ ಆ.21ರಿಂದ ಭರತನಾಟ್ಯ ಪ್ರದರ್ಶನದಲ್ಲಿ ನೀಡಿದ್ದರು.

ಗುರುವಾರ ಸಂಜೆ 5:30ರ ಸುಮಾರಿಗೆ 170 ಗಂಟೆಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶನ ಮಾಡಿ ಕಳೆದು ತಿಂಗಳು ಮಂಗಳೂರಿನ ರೆಮೋನಾ ಅವರು ಸ್ಥಾಪಿಸಿದ ವಿಶ್ವ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದರು.

ಇದನ್ನೂ ಓದಿ