ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಾಹಸ ಸಿಂಹ ವಿಷ್ಣುರ್ಧನ್ ಮತ್ತು ಪ್ರೇಮಾ ಅಭಿನಯದ ಯಜಮಾನ ಚಿತ್ರ ರೀ-ರಿಲೀಸ್ ಆಗುತ್ತಿದೆ.
25 ವರ್ಷದ ಬಳಿಕ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ವಿಷ್ಣುವರ್ಧನ್ ಚಿತ್ರ ಜೀವನದ ಅದ್ಭುತ ಚಿತ್ರವು ಇದಾಗಿದೆ. ಇದರ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಹೆಚ್ಚು ಕಡಿಮೆ ೩೦ ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಈ ಸಿನಿಮಾ 100 ದಿನ ಓಡಿದೆ. ಮತ್ತೆ ತೆರೆಗೆ ಬರ್ತಿರೋ ಈ ಚಿತ್ರದ
ಯಜಮಾನ ಚಿತ್ರ ಏಪ್ರೀಲ್-1, 2000 ರಲ್ಲಿ ರಿಲೀಸ್ ಆಗಿತ್ತು. ಆರ್. ಶೇಷಾದ್ರಿ ಹಾಗೂ ರಾಧಾ ಭಾರತಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು.
ಯಜಮಾನ ಚಿತ್ರ ಬಾಕ್ಸ್ ಆಫೀಸ್ ಅಲ್ಲೂ ಕಮಾಲ್ ಮಾಡಿದೆ. 42 ಕೋಟಿ ಕಲೆಕ್ಷನ್ ಮಾಡಿತ್ತು ಅನ್ನೋ ಮಾಹಿತಿನೂ ಸಿಗುತ್ತದೆ. ಆ ರೀತಿಯ ಈ ಚಿತ್ರ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಚಿತ್ರ ಅಂತಲೇ ಪರಿಗಣಿಸುತ್ತಾರೆ.
ನವೆಂಬರ್ 7 ರಂದು ಈ ಚಿತ್ರ ರೀ-ರಿಲೀಸ್ ಆಗುತ್ತಿದೆ. ಬೆಂಗಳೂರಿನ ಪ್ರಸನ್ನ ಥಿಯೇಟರ್ ಸೇರಿದಂತೆ ಹಲವು ಕಡೆಗೆ ಇದು ಪ್ರದರ್ಶನ ಕಾಣುತ್ತಿದೆ. .

                                    