Thursday, December 25, 2025

CINE | ರೇಟಿಂಗ್ ಕೊಡದಂತೆ ಕೋರ್ಟ್​​ನಿಂದ ಆರ್ಡರ್ ತಂದ ‘45’& ‘ಮಾರ್ಕ್​​’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬುಕ್ ಮೈ ಶೋ ಮೊದಲಾದ ರೇಟಿಂಗ್ ನೋಡಿ ಜನರು ಸಿನಿಮಾ ವೀಕ್ಷಿಸಲು ತೆರಳೋದು ಸಾಮಾನ್ಯ. ಆದರೆ, ಈಗ ಅದಕ್ಕೆ ಬ್ರೇಕ್ ಬೀಳುತ್ತಿದೆ. ಬುಕ್ ಮೈ ಶೋನಲ್ಲಿ ಬರೋ ರೇಟಿಂಗ್ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ದ್ವೇಷದ ಕಾರಣಕ್ಕೆ ಅನೇಕರು ಸುಳ್ಳು ರೇಟಿಂಗ್ ಕೊಟ್ಟ ಉದಾಹರಣೆ ಇದೆ. ಇದೇ ಕಾರಣದಿಂದ ಸಿನಿಮಾ ತಂಡದವರು ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಈಗ ‘45’ ಹಾಗೂ ‘ಮಾರ್ಕ್’ ಟೀಂ ಇದೇ ತಂತ್ರ ಉಪಯೋಗಿಸಿದೆ.

ಡಿಸೆಂಬರ್ 11ರಂದು ತೆರೆಗೆ ಬಂದ ‘ಡೆವಿಲ್’ ತಂಡದವರು ನೆಗೆಟಿವ್ ವಿಮರ್ಶೆ ಸಿಗೋ ಭಯದಲ್ಲಿ ಕೋರ್ಟ್​​ನಿಂದ ಆರ್ಡರ್ ತಂದಿದ್ದರು. ಇದನ್ನು ಬುಕ್ ಮೈ ಶೋ ಆ್ಯಪ್​ಗೆ ಸಲ್ಲಿಕೆ ಮಾಡಿದ್ದರು. ಇದರ ಅನುಸಾರ ಬುಕ್ ಮೈ ಶೋನವರು ರೇಟಿಂಗ್ ನೀಡುವ ಆಯ್ಕೆಯನ್ನು ನಿಷ್ಕ್ರಿಯ ಗೊಳಿಸಿದ್ದರು. ಈಗ ‘ಮಾರ್ಕ್’ ಹಾಗೂ ‘45’ ಸಿನಿಮಾ ಕೂಡ ಇದೇ ತಂತ್ರ ಉಪಯೋಗಿಸಿದೆ.

‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಪರಭಾಷಾ ಕಲಾವಿದರೂ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು, ‘45’ ಸಿನಿಮಾದಲ್ಲಿ ಉಪೇಂದ್ರ, ಶಿವರಾಜ್​ಕುಮಾರ್, ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳು ದೊಡ್ಡ ಬಜೆಟ್​​ನಲ್ಲಿ ರೆಡಿ ಆಗಿವೆ. ಹೀಗಾಗಿ ಎರಡೂ ಚಿತ್ರಕ್ಕೆ ಗಳಿಕೆ ತುಂಬಾನೇ ಮುಖ್ಯವಾಗಿದೆ.

error: Content is protected !!