ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಬೆಂಬಲಿಗರ ಮೇಲಿನ 12 ಪ್ರಕರಣ ಸೇರಿ 62 ಕ್ರಿಮಿನಲ್ ಕೇಸ್ ವಾಪಸ್ ಪಡೆದ ಸರ್ಕಾರದ ನಿರ್ಧಾರವನ್ನು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ .
ನಮ್ಮದಷ್ಟೆ ಅಲ್ಲ, ಬಿಜೆಪಿಯವರ ಕೇಸ್ ಕೂಡ ವಾಪಸ್ ಪಡೆದಿದ್ದಾರೆ. ಇಡಿ ಬಂಧನ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಯಾರು ಏನು ಮಾಡಲಿಲ್ಲ. ನನ್ನ ಮೇಲೆ, ಸಿಎಂ ಮೇಲೆ ಬೇಕಾದಷ್ಟು ಕೇಸ್ ಹಾಕಿಸಿದ್ರು. ನಾವು ನೋಡಿಕೊಂಡು ಕೂರಬೇಕಾ? ಅಂತ ಪ್ರಶ್ನೆ ಮಾಡಿದರು
ನನ್ನ ಮೇಲಿನ ಇಡಿ ಕೇಸ್ ವಜಾ ಆಗಿದೆ, ನಾನು ಬಂಧನ ಆಗಿದ್ದ ಕೇಸ್ ವಜಾ ಆಗಿದೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ವಜಾ ಆಯ್ತು ನನಗೆ ನ್ಯಾಯಕೊಡುವವರು ಯಾರು? ಜೈಲಿನಿಂದ ಬಿಡುಗಡೆ ಆಗಿ ಬಂದಾಗ, ದೊಡ್ಡ ಸಂಭ್ರಮಾಚರಣೆ ಅಂದ್ರು. ಯಾರೆಲ್ಲ ಟೀಕೆ ಮಾಡಿದ್ರು, ಕೇಸ್ ವಜಾ ಮಾಡಿದಾಗ ಯಾಕೆ ಅಭಿನಂದನೆ ಸಲ್ಲಿಸಲಿಲ್ಲ? ಇದೊಂದೇ ಅಲ್ಲ ನೂರಾರು ಕೇಸ್ ವಜಾ ಮಾಡಿದ್ದೇವೆ ಎಂದು ಹೇಳಿದರು.