Saturday, September 20, 2025

ಮೈಸೂರು ದಸರಾ ಚಲನಚಿತ್ರೋತ್ಸವ 2025: ಯಾವ ಸಿನಿಮಾ ಫಸ್ಟ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಸರಾ ಅಂಗವಾಗಿ, ‘ದಸರಾ ಚಲನಚಿತ್ರೋತ್ಸವ’ ಉಪಸಮಿತಿ ವತಿಯಿಂದ ಕಿರುಚಿತ್ರ ಸ್ಪರ್ಧೆ ನಡೆದಿದ್ದು, ಪ್ರಶಸ್ತಿಗಳು ಘೋಷಣೆಯಾಗಿವೆ.

ಮೈಸೂರು ದಸರಾ ಮಹೋತ್ಸವ 2025 ಹಿನ್ನೆಲೆಯಲ್ಲಿ, ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಮಲ್ಟಿಫ್ಲೆಕ್ಸ್​ನಲ್ಲಿ ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಕಿರುಚಿತ್ರಗಳಿಗೆ ಗುರುವಾರದಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸುತನ್ ನಿರ್ದೇಶನದ ‘ಲಕುಮಿ’ ಕಿರುಚಿತ್ರಕ್ಕೆ ಪ್ರಥಮ ಬಹುಮಾನ ಹಾಗೂ 20 ಸಾವಿರ ರೂಪಾಯಿಯ ಗೌರವಧನ, ಮಣಿಕಂಠ ನಿರ್ದೇಶನದ ‘ಹಿಂಬಾಲಿಸು’ ಚಿತ್ರಕ್ಕೆ ಎರಡನೇ ಬಹುಮಾನ ಹಾಗೂ 15 ಸಾವಿರ ರೂಪಾಯಿ ಗೌರವಧನ ಮತ್ತು ಶಶಿಕುಮಾರ್ ಡಿ.ಎಸ್. ನಿರ್ದೇಶನದ ಹಬ್ಬದ ‘ಹಸಿವು’ ಚಿತ್ರಕ್ಕೆ ಮೂರನೇ ಬಹುಮಾನ ಹಾಗೂ 10 ಸಾವಿರ ರೂ. ಗೌರವಧನ ನೀಡಲಾಯಿತು. ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ‘ಲಕುಮಿ’ ಹಾಗೂ ಅತ್ಯುತ್ತಮ ಸಂಕಲನಕಾರ ವಿಭಾಗದಲ್ಲಿ ‘ಹಿಂಬಾಲಿಸು’ ಕಿರುಚಿತ್ರಕ್ಕೆ ಪ್ರಶಸ್ತಿ ದೊರೆಯಿತು.

ಇದನ್ನೂ ಓದಿ