Sunday, September 21, 2025

ಕಲ್ಕಿ ಸಿನಿಮಾದಿಂದ ಹೊರಬಂದಿದ್ದಕ್ಕೆ ರೀಸನ್‌ ಕೊಟ್ಟ ದೀಪಿಕಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ದೀಪಿಕಾ ಪಡುಕೋಣೆ ಕಲ್ಕಿ ಸಿನಿಮಾದಿಂದ ಹೊರಬಂದಿದ್ದಾರೆ. ಕಲ್ಕಿ ಸಿನಿಮಾದಲ್ಲಿ ದೀಪಿಕಾ ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಇದೀಗ ಸಿನಿಮಾ ತಂಡ ಸೀಕ್ವೆಲ್‌ನಲ್ಲಿ ದೀಪಿಕಾ ಬದಲು ಯಾರನ್ನು ಆರಿಸುತ್ತಾರೆ ಎಂದು ಜನರು ಕಾಯುತ್ತಿದ್ದಾರೆ.

ಇತ್ತ ದೀಪಿಕಾ ಶಾರುಖ್‌ ಖಾನ್‌ ಕೈ ಹಿಡಿದುಕೊಂಡಿರುವ ಫೋಟೊವೊಂದನ್ನು ಪೋಸ್ಟ್‌ ಮಾಡಿದ್ದಾರೆ.‘ಒಂದು ಸಿನಿಮಾ ಮಾಡುವ ಅನುಭವ ಮತ್ತು ನೀವು ಅದನ್ನು ಯಾರ ಜೊತೆ ಮಾಡುತ್ತಿದ್ದೀರಿ ಎಂಬುದು ಅದರ ಯಶಸ್ಸಿಗಿಂತ ಹೆಚ್ಚು ಮುಖ್ಯ. ಸುಮಾರು 18 ವರ್ಷಗಳ ಹಿಂದೆ ಓಂ ಶಾಂತಿ ಓಂ ಚಿತ್ರೀಕರಣದ ಸಮಯದಲ್ಲಿ ಶಾರುಖ್ ಖಾನ್ ನನಗೆ ಕಲಿಸಿದ ಮೊದಲ ಪಾಠ ಇದು. ಅಂದಿನಿಂದ ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರಕ್ಕೂ ಆ ಕಲಿಕೆಯನ್ನು ಅನ್ವಯಿಸಿದ್ದೇನೆ. ಆ ಕಾರಣಕ್ಕೇ ಇರಬೇಕು, ನಾವು ಆರನೇ ಚಿತ್ರವನ್ನು ಒಟ್ಟಾಗಿ ಮಾಡುತ್ತಿದ್ದೇವೆ ಅನಿಸುತ್ತದೆ’ ಎಂದು ದೀಪಿಕಾ ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಅವರಿಗೆ ಮಗು ಜನಿಸಿದೆ. ಆ ಬಳಿಕವೂ ಅವರು ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ, ಅವರ ಷರತ್ತುಗಳ ಪಟ್ಟಿ ದೊಡ್ಡದಿದೆ. ಮಗುವಿಗೆ ಹೆಚ್ಚು ಸಮಯ ನೀಡಬೇಕಾದ ಅನಿವಾರ್ಯತೆ ಇರುವುದರಿಂದ ದೀಪಿಕಾ ಅವರು ದಿನದಲ್ಲಿ 7-8 ಗಂಟೆ ಮಾತ್ರ ಶೂಟ್ ಮಾಡೋದಾಗಿ ಹೇಳಿದ್ದಾರೆ. ಜೊತೆಗೆ ಹೆಚ್ಚಿನ ಸಂಭಾವನೆ ಕೇಳುತ್ತಿದ್ದಾರೆ. ಈ ಷರತ್ತನ್ನು ಅಲ್ಲು ಅರ್ಜುನ್-ಅಟ್ಲಿ ಸಿನಿಮಾ ತಂಡ ಒಪ್ಪಿಕೊಂಡಿದೆ. ಜೊತೆಗೆ ಶಾರುಖ್ ಖಾನ್ ನಟನೆಯ ‘ಕಿಂಗ್​’ನ ಭಾಗ ಕೂಡ ಆಗಿದ್ದಾರೆ. ಈ ಚಿತ್ರದ ಮೊದಲ ದಿನದ ಶೂಟ್​ನಲ್ಲಿ ದೀಪಿಕಾ ಭಾಗಿ ಆಗಿದ್ದಾರೆ.

ಇದನ್ನೂ ಓದಿ