Sunday, September 21, 2025

CINE | ಈ ರೀತಿ ಎಕ್ಸ್ಟ್ರಾ ಮಾಡೋದು ತಪ್ಪು! ದೀಪಿಕಾ ಬಗ್ಗೆ ಆಮಿರ್‌ ಖಾನ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ ತಾಯಿಯಾಗಿದ್ದಾರೆ. ನಟನೆಯ ಜೊತೆಗೆ ಮಗುವನ್ನು ಬ್ಯಾಲೆನ್ಸ್‌ ಮಾಡೋದಕ್ಕೆ ದೀಪಿಕಾ ತಮ್ಮ ಕೆಲಸದ ರೊಟೀನ್‌ನಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.

ಕೆಲಸದ ಅವಧಿ ಕಡಿಮೆ, ಸಂಭಾವನೆ ಜಾಸ್ತಿ, ಕೇರ್‌ ಟೇಕರ್‌ಗಳಿಗೆ ಹಣ, ಇನ್ನಿತರ ಡಿಮ್ಯಾಂಡ್‌ಗಳನ್ನು ಮಾಡಿದ್ದಾರೆ. ಇದು ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಆಮಿರ್‌ ಖಾನ್‌ ಕೂಡ ಇಂಡೈರೆಕ್ಟ್‌ ಆಗಿ ಮಾತನಾಡಿದ್ದಾರೆ. ಸಿನಿಮಾ ಪ್ರೊಡ್ಯೂಸರ್ಸ್‌ ಎಲ್ಲದಕ್ಕೂ ಯಾಕೆ ಹಣ ಕೊಡಬೇಕು? ನಟ-ನಟಿಯರಿಗೆ ಒಂದು ಕ್ಯಾರಾವಾನ್‌ ಕೊಡಬೇಕು ಕೊಟ್ಟೇ ಕೊಡುತ್ತಾರೆ. ಐದಾರು ಗಾಡಿಯ ತುಂಬಾ ಜನರನ್ನು ಕರೆದುಕೊಂಡು ಬಂದು, ಅಸಿಸ್ಟೆಂಟ್‌ ಎಂದು ಹೇಳಿ ಅವರಿಗೂ ನೀವೇ ಸಂಬಳ ಕೊಡಿ ಎಂದು ಕೇಳಿದರೆ ಅದು ಹೇಗೆ ಸಾಧ್ಯ?

ಸಿನಿಮಾ ಸಂಬಂಧಿಸಿದ ಕೆಲಸಕ್ಕೆ ಬೇಕಾದರೆ ಹಣ ಕೇಳಬೇಕು, ಆದರೆ ಅವರವರ ಪರ್ಸನಲ್‌ ಬಿಲ್‌ಗಳನ್ನು ಪ್ರೊಡ್ಯೂಸರ್‌ಗೆ ಕೊಡೋಕೆ ಸಾಧ್ಯವಾ? ಎಂದು ಆಮೀರ್‌ ದೀಪಿಕಾ ಬಗ್ಗೆ ಟಾಂಗ್‌ ನೀಡಿದ್ದಾರೆ.

ಇದನ್ನೂ ಓದಿ