ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಕಾಂತಾರ ಚಾಪ್ಟರ್-1 ಸಿನಿಮಾ ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಪೋಸ್ಟರ್‌ಗಳ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಚಿತ್ರದ ಬಿಡುಗಡೆಯ ದಿನಗಣನೆ ಆರಂಭವಾಗಿದ್ದು, ಹೊಂಬಾಳೆ ಫಿಲ್ಮ್ಸ್ ಪ್ರಚಾರ ಕಾರ್ಯಕ್ಕೆ ಭಾರತೀಯ ಸಿನಿತಾರೆಯರ ಬೆಂಬಲವನ್ನು ಪಡೆದುಕೊಂಡಿದೆ.
ಸೆಪ್ಟೆಂಬರ್ 22ರಂದು ಚಿತ್ರದ ಟ್ರೇಲರ್ ಬಹುಭಾಷೆಗಳಲ್ಲಿ ಒಂದೇ ದಿನ ರಿಲೀಸ್ ಆಗಲಿದೆ. ಹಿಂದಿ ಆವೃತ್ತಿಯನ್ನು ಬಾಲಿವುಡ್ ನಟ ಹೃತಿಕ್ ರೋಷನ್ ಬಿಡುಗಡೆ ಮಾಡಲಿದ್ದು, ತಮಿಳು ಆವೃತ್ತಿಯನ್ನು ನಟ ಶಿವಕಾರ್ತಿಕೇಯನ್ ರಿಲೀಸ್ ಮಾಡಲಿದ್ದಾರೆ. ಮಲಯಾಳಂ ವರ್ಷನ್‌ನ್ನು ಪೃಥ್ವಿರಾಜ್ ಅಥವಾ ಮೋಹನ್‌ಲಾಲ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನು ತೆಲುಗು ಟ್ರೇಲರ್‌ನ್ನು ಜೂ. ಎನ್‌ಟಿಆರ್ ಅಥವಾ ಪ್ರಭಾಸ್ ಬಿಡುಗಡೆ ಮಾಡುವ ನಿರೀಕ್ಷೆ ವ್ಯಕ್ತವಾಗಿದೆ.
ಟೈಟಲ್ ಟೀಸರ್ ಹಾಗೂ ಪೋಸ್ಟರ್‌ಗಳ ಮೂಲಕವೇ ಅಪಾರ ಕುತೂಹಲ ಹುಟ್ಟಿಸಿರುವ ಈ ಸಿನಿಮಾ, ಭರ್ಜರಿ ತಾರಾಗಣ ಮತ್ತು ವೈಶಿಷ್ಟ್ಯಪೂರ್ಣ ಕಥಾಹಂದರದಿಂದ ಗಮನ ಸೆಳೆದಿದೆ.