Sunday, September 21, 2025

ತಿರುವನಂತಪುರಂ ಬಿಜೆಪಿ ಕೌನ್ಸಿಲರ್ ಅನಿಲ್ ಕುಮಾರ್ ಶವವಾಗಿ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುವನಂತಪುರಂನ ಬಿಜೆಪಿ ವಾರ್ಡ್ ಕೌನ್ಸಿಲ್ ಕಚೇರಿಯಲ್ಲಿ ಬಿಜೆಪಿ ನಾಯಕ,ತಿರುಮಲ ವಾರ್ಡ್ ಕೌನ್ಸಿಲರ್ ಕೆ. ಅನಿಲ್ ಕುಮಾರ್ ಅವರು ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ.

ತಿರುಮಲದ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಬಿಜೆಪಿ ವಾರ್ಡ್ ಕೌನ್ಸಿಲ್ ಕಚೇರಿಯಲ್ಲಿ ಅನಿಲ್ ಕುಮಾರ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಬೆಳಗ್ಗೆ 8.30 ರ ಸುಮಾರಿಗೆ ಪತ್ತೆಯಾಗಿದ್ದಾರೆ.

ಪೊಲೀಸರ ಪ್ರಕಾರ, ಅನಿಲ್ ಕುಮಾರ್ ಬರೆದಿದ್ದಾರೆಂದು ನಂಬಲಾದ ಡೆತ್ ನೋಟ್ ಸಹ ಕಚೇರಿಯಲ್ಲಿ ಪತ್ತೆಯಾಗಿದೆ. ಅದರಲ್ಲಿ ಅವರು ಸಹಕಾರಿ ಸಂಘಕ್ಕೆ ಸಂಬಂಧಿಸಿದ ಹಣಕಾಸಿನ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಪಕ್ಷದ ನಾಯಕರಿಂದ ಸರಿಯಾದ ಬೆಂಬಲ ಸಿಗದಿದ್ದಕ್ಕಾಗಿ ನಿರಾಶೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ