Saturday, September 20, 2025

ಹಿಂದು ಧರ್ಮದ ಜೊತೆ ಕ್ರಿಶ್ಚಿಯನ್ ಸೇರ್ಪಡೆ: ಸಮೀಕ್ಷೆಯಲ್ಲಿ ಅನಗತ್ಯ ಇರೋದನ್ನು ತೆಗೆದು ಹಾಕ್ತಾರೆ ಎಂದ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಚಿವ ಸಂಪುಟದಲ್ಲಿ ಹಿಂದು ಧರ್ಮದ ಜೊತೆ ಕ್ರಿಶ್ಚಿಯನ್ ಸೇರ್ಪಡೆ ಬಗ್ಗೆ ಚರ್ಚೆ ಆಗಿದೆ. ಅನಗತ್ಯ ಇರುವುದನ್ನು ತೆಗೆದು ಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣತಿಗೆ 1,45,000 ಶಿಕ್ಷಕರನ್ನು ನೇಮಿಸಲಾಗಿದೆ. 15 ದಿನಗಳ ಕಾಲ ಮನೆ ಮನೆಗೂ ಹೋಗಿ ಸಮೀಕ್ಷೆ ಮಾಡುತ್ತಾರೆ. ಇದು ಜಾತಿ ಗಣತಿ, ಸಮೀಕ್ಷೆ ಅಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಿಕ್ಷೆ ಮಾಡುತ್ತಾರೆ. ಅವಕಾಶದಿಂದ ವಂಚಿತರಾದವರಿಗೆ ಮೊದಲ ಆದ್ಯತೆಗೆ ಸಮೀಕ್ಷೆ ಮಾಡಲಾಗುತ್ತಿದೆ ಎಂದರು.

ಸಮೀಕ್ಷೆಗೆ ಕೆಲವು ಸಚಿವರು, ಶಾಸಕರು ವಿರೋಧ ಕುರಿತು ಮಾತನಾಡಿ, ಸಮಿಕ್ಷೆಗೆ ಸಚಿವರು, ಶಾಸಕರು ಯಾರೂ ವಿರೋಧ ಮಾಡಿಲ್ಲ. ಸಮಾಜದಲ್ಲಿ ಸಮಾನತೆ ತರಬೇಕಿದ್ದರೆ ಅವಕಾಶದಿಂದ ವಂಚಿತರಾದವರಿಗೆ ಅವಕಾಶ ಕೊಡಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ತಿಳಿಯಲು ಸಮಿಕ್ಷೆ ಮಾಡಲಾಗುತ್ತಿದೆ. ಹಿಂದುಳಿದ ಆಯೋಗ ಸಮಿಕ್ಷೆ ಮಾಡುತ್ತಿದೆ. ಅದರಲ್ಲಿ ನಾವು ಮಧ್ಯೆ ಪ್ರವೇಶಿಸಲ್ಲ ಎಂದರು.

ಹಿಂದು ಜೊತೆ ಕ್ರಿಶ್ಚಿಯನ್ ಪದ ಬಳಕೆ ಬಗ್ಗೆ ಮರು ಪರಿಶೀಲನೆ ಮಾಡಿ ಎಂದು ರಾಜ್ಯಪಾಲರು ಸಿಎಂಗೆ ಪತ್ರ ಬರೆದಿರುವ ಕುರಿತು ಮಾತನಾಡಿ, ಬಿಜೆಪಿಯವರು ಕಳುಹಿಸಿದ ಲೆಟರ್ ರಾಜ್ಯಪಾಲರು ನನಗೆ ಕಳುಹಿಸಿದ್ದಾರೆ. ಬಿಜೆಪಿ ಅವರ ಲೆಟರ್ ಫಾರ್ವಡ್ ಮಾಡಿದ್ದಾರೆ ಅಷ್ಟೇ. ಬಿಜೆಪಿಯವರು ರಾಜಕಿಯಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ