ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನತೆಗೆ ನವರಾತ್ರಿಯ ಶುಭಾಶಯ ತಿಳಿಸಿದ್ದಾರೆ. ನಾಗರಿಕರಲ್ಲಿ ಹೊಸ ಶಕ್ತಿ, ಆತ್ಮವಿಶ್ವಾಸ ಹೆಚ್ಚಲಿ ಎಂದು ಹಾರೈಸಿದ್ದಾರೆ. ಇದರ ಜೊತೆಗೆ ದೇವಿಗೆ ಸಂಬಂಧಸಿದ ಭಜನೆ ಇದ್ದರೆ ನನ್ನೊಂದಿಗೆ ಹಂಚಿಕೊಳ್ಳಿ ಎಂದು ಹೇಳಿದ್ದಾರೆ.
ಸಂಗೀತದ ಮೂಲಕ ಭಕ್ತಿಯನ್ನು ಅಂತರ್ಗತಗೊಳಿಸುವುದು ಕೂಡ ಒಂದು ವಿಧಾನ. ಪ್ರಧಾನಿ ಮೋದಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪಂಡಿತ್ ಜಸ್ರಾಜ್ ಅವರ ಅಂತಹ ಒಂದು ಭಾವಪೂರ್ಣ ಗಾಯನವನ್ನು ಹಂಚಿಕೊಂಡಿದ್ದಾರೆ.
ನೀವು ಭಜನೆ ಹಾಡಿದ್ದರೆ ಅಥವಾ ನಿಮ್ಮಲ್ಲಿ ಇಷ್ಟವಾದ ಭಜನೆ ಇದ್ದರೆ, ಅದನ್ನು ನನ್ನೊಂದಿಗೆ ಹಂಚಿಕೊಳ್ಳಿ. ಮುಂದಿನ ದಿನಗಳಲ್ಲಿ ನಾನು ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.