ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರಿಗಮಪ ರಿಯಾಲಿಟಿ ಶೋ ಮೂಲಕ ಭಾರೀ ಜನಪ್ರಿಯತೆ ಗಳಿಸಿರುವ ಕನ್ನಡದ ಖ್ಯಾತ ಗಾಯಕಿ ಸುಹಾನಾ ಸಯ್ಯದ್ ಇದೀಗ ಪ್ರೀತಿಸುತ್ತಿರುವ ಹುಡುಗನ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.
ಹಿಂದೊಮ್ಮೆ ಹಿಂದೂ ದೇವರ ಭಜನೆ ಹಾಡಿದ್ದಕ್ಕೆ ವಿವಾದಕ್ಕೀಡಾಗಿದ್ದ ಗಾಯಕಿ. ಶಿವಮೊಗ್ಗದ ಸಾಗರದ ಚೆಲುವೆ, ಸಿನಿಮಾಗಳಲ್ಲೂ ಹಿನ್ನೆಲೆ ಗಾಯಕನ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ನಿರ್ಭೀತಿಯಿಂದ ತಾವು ಪ್ರೀತಿಸುತ್ತಿರುವ ಹುಡುಗನನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ನಿತಿನ್ ಶಿವಾಂಶ್ ಜೊತೆ ಪ್ರೀತಿಯ ಗುಟ್ಟನ್ನ ರಟ್ಟು ಮಾಡಿರುವ ಸುಹಾನಾ ಸಯ್ಯದ್, ತಾವು ಈ ಪ್ರೀತಿಯಲ್ಲಿ ಎದುರಿಸಿದ ಸವಾಲಿನ ಕುರಿತು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ರಂಗಭೂಮಿ ಕಲಾವಿದ ಆಗಿರುವ ನಿತಿನ್ ಶಿವಾಂಶ್ ಸಿನಿಮಾದಲ್ಲೂ ಸಕ್ರಿಯರಾಗಿದ್ದಾರೆ. ಶಾಲಾ ದಿನಗಳಲ್ಲೇ ನಿತಿನ್ ಶಿವಾಂಶ್ ಪರಿಚಯ ಇರೋದಾಗಿ ಸುಹಾನಾ ಹೇಳಿಕೊಂಡಿದ್ದಾರೆ. 16 ವರ್ಷಗಳ ಸ್ನೇಹ ಪ್ರೀತಿಯಾಗಿ ಚಿಗುರಿದೆ. ಇದೀಗ ಪ್ರೇಮಿಗಳು ಸಮಾಜದ ಮುಂದೆ ಬಲವಾಗಿ ಎದ್ದು ನಿಂತು ತಮ್ಮ ಪ್ರೀತಿಯ ವಿಚಾರ ಘೋಷಿಸಿದ್ದಾರೆ. ಪ್ರೀತಿಯ ಗುಟ್ಟನ್ನ ನಿಮ್ಮ ಮುಂದೆ ತೆರೆದಿಡುತ್ತೇವೆ ಎಂದು ಘೋಷಿಸಿದ ಸುಹಾನಾ ಸಯ್ಯದ್ ಜೋಡಿ ಫೋಟೋ ಹಂಚಿಕೊಂಡಿದ್ದಾರೆ.
ಜಗತ್ತಿಗೆ ಬಾಯ್‌ಫ್ರೆಂಡ್‌ನ್ನು ಪರಿಚಯಿಸಿದ ಸಿಂಗರ್ ಸುಹಾನಾ ಸೈಯದ್
