ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಧರ್ಮ ಪಾಲನೆ ಹೊಸ್ತಿಲು ದಾಟಿ ಹೊರಬಂದಿಲ್ಲ. ನನ್ನ ಧರ್ಮ ಪಾಲಿಸುತ್ತೇನೆ, ಬೇರೆ ಧರ್ಮಗಳ ಬಗ್ಗೆಯೂ ಗೌರವ ಇದೆ ಎಂದು ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಭಾನು ಮುಷ್ತಾಕ್ ಹೇಳಿದ್ದಾರೆ.
ದಸರಾ ಉದ್ಘಾಟನೆ ಕಾರ್ಯಕ್ರಮದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ, ನನ್ನ ಅಭಿಪ್ರಾಯ ಮಾತಲ್ಲಿ ಹೇಳುವುದು ಏನಿಲ್ಲ. ಎಲ್ಲಾ ನನ್ನ ನಡುವಳಿಕೆಯಲ್ಲೇ ಇದೆ ಎಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ನಾನು ನನ್ನ ಧರ್ಮವನ್ನು ಪಾಲನೆ ಮಾಡುತ್ತೇನೆ. ಅದು ನನ್ನ ವೈಯುಕ್ತಿಕವಾದದ್ದು. ಅದು ಯಾವತ್ತೂ ಹೊಸ್ತಿಲು ದಾಟಿ ಹೊರಬಂದಿಲ್ಲ. ನನಗೆ ಬೇರೆ ಧರ್ಮಗಳ ಬಗ್ಗೆ ಅಪಾರವಾದ ಗೌರವವಿದೆ ಎಂದರು.
ನನ್ನ ಧರ್ಮ ಪಾಲಿಸ್ತೇನೆ, ಇತರ ಧರ್ಮದ ಬಗ್ಗೆ ಗೌರವವಿದೆ: ಮುಷ್ತಾಕ್
