ಹೊಸದಿಗಂತ ವರದಿ ಸೋಮವಾರಪೇಟೆ:
ಜಿ.ಎಸ್.ಟಿ. ಕಡಿತ ಜನಸಾಮಾನ್ಯರಿಗೆ ವರದಾನವೆಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಏರ್ಪಡಿಸಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲಾ ಸರ್ಕಾರಗಳು ಒಮ್ಮೆ ತೆರಿಗೆ ಏರಿಸಿದ ನಂತರ ಮುಂದಕ್ಕೆ ಹೆಚ್ಚಿಗೆ ಮಾಡಿಕೊಂಡೇ ಹೋಗುತ್ತವೆ. ಆದರೆ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಏರಿಸಿದ್ದ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ದಾಖಲೆ ಬರೆದಿದೆ ಎಂದರು.
ಕೇಂದ್ರ ಸರ್ಕಾರ 350 ಕ್ಕೂ ಅಧಿಕ ವಸ್ತುಗಳ ಮೇಲಿನ ಜಿ.ಎಸ್.ಟಿ ಯನ್ನು ಕಡಿತಗೊಳಿಸಿ ಜನ ಸಾಮಾನ್ಯರಿಗೆ ನೆರವಾಗಿದೆ. ಕ್ಯಾನ್ಸರ್ ರೋಗಿಗಳ ಔಷಧಿಗಳನ್ನ ತೆರಿಗೆ ಇಲ್ಲದೆ ಖರೀದಿಸಬಹು. ಹಾಗೆ ಶಿಕ್ಷಣದ ವಸ್ತುಗಳಿಗೂ ರಿಯಾಯಿತಿ ನೀಡಿ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಿದೆ ಎಂದು ಹೇಳಿದರು.
ವರ್ತಕರ ಸಂಘದ ಹಿರಿಯ ಸದಸ್ಯ ತಿಮ್ಮಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ವರ್ತಕರ ಹಿತಾಸಕ್ತಿಯನ್ನು ಗಮದಲ್ಲಿರಿಸಿಕೊಂಡು ಜಿ.ಎಸ್.ಟಿ. ಕಡಿತಗೊಳಿಸಿರುವುದು ಸ್ವಾಗತಾರ್ಹ. ಜನಸಾಮಾನ್ಯರಿಗೆ ಹೊರೆಯಾಗುವುದನ್ನು ತಪ್ಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ವರ್ತಕರ ಸಂಘದ ಅಧ್ಯಕ್ಷ ಧನಂಜಯ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಜಿಲ್ಲಾ ಉಪಾಧ್ಯಕ್ಷ ಮನು ಕುಮಾರ್ ರೈ, ರೈತಮೋರ್ಚಾ ಕಾರ್ಯದರ್ಶಿ ಶರತ್ , ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಕಾರ್ಯದರ್ಶಿ ಇಂದಿರಾ ಮೋನಪ್ಪ, ದರ್ಶನ್, ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ತಂಗಮ್ಮ, ವಿ.ಎಸ್.ಎಸ್.ಬಿ.ಎನ್. ಮಾಜಿ ಅಧ್ಯಕ್ಷೆ ರೂಪಾ ಸತೀಶ್ ಹಾಗೂ ಪಕ್ಷದ ಪ್ರಮುಖರು,ಕಾರ್ಯಕರ್ತರು ಹಾಜರಿದ್ದರು.