ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಹಬ್ಬದಲ್ಲಿ ಹಿಂದು ಸಂಸ್ಕೃತಿ ಪ್ರಕಾರ ಶ್ರದ್ಧೆ ತೋರಿರುವುದು ರಾಜ್ಯ ರಾಜಕೀಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಬಾನು ಮುಷ್ತಾಕ್ ಮಾಡಿದ ಶಿಷ್ಟಾಚಾರ ಮತ್ತು ಸಂಸ್ಕೃತಿಯ ಗೌರವಕ್ಕೆ ಸಂತೋಷ ವ್ಯಕ್ತಪಡಿಸಿದರು.
ಛಲವಾದಿ ನಾರಾಯಣಸ್ವಾಮಿ ಅವರು ಹೇಳಿರುವಂತೆ, “ಬಾನು ಮುಷ್ತಾಕ್ ಅವರ ಹಿಂದಿನ ಹೇಳಿಕೆಗಳಿಗೆ ನಮ್ಮ ವಿರೋಧ ಇತ್ತು. ಆದರೆ ಇವತ್ತಿನ ಅವರು ಮಾಡಿರುವ ದಸರಾ ಕಾರ್ಯಕ್ರಮ ಮತ್ತು ಹಿಂದು ಸಂಸ್ಕೃತಿಗೆ ತೋರಿಸಿರುವ ಗೌರವ ನಮ್ಮ ನಿರೀಕ್ಷೆ ಮೀರಿಸಿದೆ. ಮುಸ್ಲಿಂ ಹೆಣ್ಣುಮಗಳು ಹಿಂದು ಸಂಪ್ರದಾಯದಂತೆ ಅರಿಶಿಣ ಬಣ್ಣದ ಸೀರೆಯುಟ್ಟು, ಹೂ ಮುಡಿದು ದೇವಾಲಯಕ್ಕೆ ಬಂದು ಆರತಿ ಪಡೆದಿದ್ದು ನಮಗೆ ಸಂತೋಷ ನೀಡಿದೆ.”
ಅಧಿಕಾರಿಗಳು ಹಾಗೂ ಸಾರ್ವಜನಿಕರು ಈ ಮೂಲಕ ಸಾಮಾಜಿಕ ಸಮ್ಮಿಲನ ಮತ್ತು ಧಾರ್ಮಿಕ ಸಹಿಷ್ಣುತೆ ಹೇಗೆ ವ್ಯಕ್ತವಾಗಬಹುದು ಎಂಬುದನ್ನು ಗಮನಿಸಿದ್ದಾರೆ. ಈ ಶಿಷ್ಟಾಚಾರವು ಬಾನು ಮುಷ್ತಾಕ್ ಮೇಲೆ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.