Monday, September 22, 2025

ಜೀರ್ಣೋದ್ಧಾರಗೊಂಡ ತ್ರಿಪುರ ಸುಂದರಿ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ತ್ರಿಪುರದ ಗೋಮತಿ ಜಿಲ್ಲೆಯ ಉದಯಪುರದಲ್ಲಿ ಜೀರ್ಣೋದ್ಧಾರಗೊಂಡ 5 ಶತಮಾನಗಳಷ್ಟು ಹಳೆಯದಾದ ತ್ರಿಪುರ ಸುಂದರಿ ದೇವಾಲಯವನ್ನು ಇಂದು ಪ್ರಧಾನಿ ಮೋದಿ ಅವರು
ಉದ್ಘಾಟಿಸಿದರು.

ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ನಂತರ ತ್ರಿಪುರಕ್ಕೆ ಆಗಮಿಸಿದ ಮೋದಿ ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪುನರ್ನಿರ್ಮಾಣಗೊಂಡ ಸ್ಥಳದ ವಿವಿಧ ಭಾಗಗಳಿಗೆ ಭೇಟಿ ನೀಡಿದರು.

ತ್ರಿಪುರ ರಾಜ್ಯಪಾಲ ಇಂದ್ರಸೇನ ರೆಡ್ಡಿ ನಲ್ಲು, ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ, ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್, ಪ್ರವಾಸೋದ್ಯಮ ಸಚಿವ ಸುಶಾಂತ ಚೌಧರಿ ಮತ್ತು ಬಿಜೆಪಿ ರಾಜ್ಯ ಮುಖ್ಯಸ್ಥ ರಾಜೀಬ್ ಭಟ್ಟಾಚಾರ್ಯ ಅವರು ಪ್ರಧಾನಿ ಮೋದಿ ಅವರೊಂದಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

2018 ರಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ಸರ್ಕಾರವು ತ್ರಿಪುರ ಸುಂದರಿ ದೇವಾಲಯದ ಸುತ್ತಲಿನ ಪ್ರವಾಸೋದ್ಯಮ ವಲಯವನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. 52 ಕೋಟಿ ರೂ. ವೆಚ್ಚದಲ್ಲಿ ಮರುಅಭಿವೃದ್ಧಿಪಡಿಸಲಾದ ಈ ದಏವಾಲಯ ಎಲ್ಲಾ 51 ಶಕ್ತಿಪೀಠಗಳ ಪ್ರತಿಕೃತಿಯನ್ನು ಹೊಂದಿರುವ ಹತ್ತಿರದ ಸ್ಥಳದೊಂದಿಗೆ, ಈಶಾನ್ಯ ಪ್ರದೇಶದ ಪ್ರವಾಸೋದ್ಯಮಕ್ಕೆ ಒಂದು ಪ್ರಮುಖ ಬದಲಾವಣೆಯಾಗಿದೆ ಎಂದು ಹೇಳಲಾಗಿದೆ.

ಪ್ರವಾಸೋದ್ಯಮ ಸಚಿವಾಲಯದ ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವೃದ್ಧಿ ಡ್ರೈವ್ ಅಥವಾ ‘ಪ್ರಸಾದ್’ ಯೋಜನೆಯ ನಿಧಿಯಿಂದ ದೇವಾಲಯವನ್ನು ಪುನರುಜ್ಜೀವನಗೊಳಿಸಲಾಯಿತು. ಇದರ ಜೊತೆಗೆ ರಾಜ್ಯ ಸರ್ಕಾರದಿಂದ 7 ಕೋಟಿ ರೂ.ಗಳ ಕೊಡುಗೆಯನ್ನು ನೀಡಲಾಯಿತು.

ಇದನ್ನೂ ಓದಿ