Tuesday, September 23, 2025

ಬಾಲಿವುಡ್ ಗಾಯಕ ಕುಮಾರ್ ಸಾನು ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಪತ್ನಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಗಾಯಕ ಕುಮಾರ್ ಸಾನು ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿ ಬಂದಿದೆ.‌ ಅವರ ಮಾಜಿ ಪತ್ನಿ ರೀಟಾ ಭಟ್ಟಾಚಾರ್ಯ ಹಲವು ಆರೋಪಗಳನ್ನು ಹೊರಿಸಿದ್ದಾರೆ.

ತಾನು ಗರ್ಭಿಣಿಯಾಗಿದ್ದಾಗ ಕುಮಾರ್ ಸಾನು ಹೀನಾಯವಾಗಿ ಹಿಂಸಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಕುಮಾರ್ ಸಾನು ಹೊಂದಿರುವ ಆಫೇರ್ ಬಗ್ಗೆಯೂ ಮಾತನಾಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದ ರೀಟಾ ಭಟ್ಟಾಚಾರ್ಯ, ಮದುವೆಯಾದ ಬಳಿಕ ಹಲವು ರೀತಿಯ ಹಿಂಸೆಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ತಮ್ಮ ಮೂರನೇ ಮಗು ಜಾನ್ ಕುಮಾರ್ ಸಾನು ಗರ್ಭದಲ್ಲಿದ್ದಾಗ ಕುಮಾರ್ ಸಾನು ಅವರಿಂದ ಚಿತ್ರಹಿಂಸೆಗೆ ಒಳಗಾಗಿದ್ದಾಗಿ ದೂರಿದ್ದಾರೆ. ಸರಿಯಾದ ಊಟ, ವೈದ್ಯಕೀಯ ಸೇವೆ ಮತ್ತು ಮನೆಯಿಂದ ಹೊರಗೆ ಹೋಗುವ ಸ್ವಾತಂತ್ರ್ಯವನ್ನು ಕೂಡ ನಿರಾಕರಿಸಿದ್ದರು. ಗರ್ಭಿಣಿಯಾಗಿದ್ದಾಗ ತನಗೆ ಸರಿಯಾಗಿ ಊಟ ಇರುತ್ತಿರಲಿಲ್ಲ. ಮನೆಗೆಲಸದವರಿಗೆ ಹೋಲಿಸಿ ಅಪಹಾಸ್ಯ ಮಾಡುತ್ತಿದ್ದರು ಎಂದು ರೀಟಾ ಕಣ್ಣೀರು ಸುರಿಸಿದ್ದಾರೆ.

‘ಅವರು ಅಫೇರ್ ಇಟ್ಟಕೊಂಡು ಗರ್ಭಿಣಿಯಾಗಿದ್ದಾಗಲೂ ತಾನು ಬೇರೊಬ್ಬರೊಂದಿಗೆ ಸಂಬಂಧ ಹೊಂದಿರುವುದಾಗಿ ನನ್ನ ಮೇಲೇಯೇ ಆರೋಪ ಹೊರಿಸಿದ್ದರು. ಅದಕ್ಕೆ ನನ್ನನ್ನೇ ದೂಷಿಸಿ ಗರ್ಭಿಣಿಯಾಗಿದ್ದಾಗಲೂ ನ್ಯಾಯಾಲಯಕ್ಕೆ ಕರೆದೊಯ್ದರು’ʼ ಎಂದು ಕರಾಳ ಅನುಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ