ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿಯರಾದ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ಇಬ್ಬರು ಸೇರಿ “ಟು ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್” ಎಂಬ ವಿಶೇಷ ಟಾಕ್ ಶೋವನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ. ಇದೇ ವಾರದಿಂದ ಪ್ರೈಮ್ ವಿಡಿಯೋದಲ್ಲಿ ಈ ಶೋ ಸ್ಟ್ರೀಮಿಂಗ್ ಆಗಲಿದ್ದು, ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.
ಈ ಶೋನ ಮೊದಲ ಸಂಚಿಕೆಯಲ್ಲಿ ಬಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳಾದ ಆಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಎಪಿಸೋಡ್‌ನಲ್ಲಿ ಅವರು ತಮ್ಮ ಬಾಲ್ಯ, ಮೊದಲ ಸಿನಿಮಾ ಅನುಭವ, ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇದೆ.
ಕಾಜೋಲ್ ಅವರ ನೇರ ಸ್ವಭಾವ ಮತ್ತು ಟ್ವಿಂಕಲ್ ಖನ್ನಾ ಅವರ ಬುದ್ಧಿವಂತಿಕೆ ಈ ಶೋಗೆ ವಿಭಿನ್ನ ಬಣ್ಣ ತುಂಬಲಿದೆ. ಮಾತುಕತೆ, ಮಜಾ ಮತ್ತು ಖಾಸಗಿ ನೆನಪುಗಳ ಸಂಯೋಜನೆಯೊಂದಿಗೆ ಇದು ಸಾಮಾನ್ಯ ಟಾಕ್ ಶೋಗೆ ಹೋಲಿಕೆಯಾಗದಂತಿದೆ.
ಪ್ರೈಮ್ ವಿಡಿಯೋ ಮೂಲಕ ಈ ಶೋ ಕೇವಲ ಭಾರತದಲ್ಲೇ ಅಲ್ಲ, 240 ದೇಶಗಳಲ್ಲಿ ಒಂದೇ ಸಮಯದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದರಿಂದಾಗಿ ವಿಶ್ವದಾದ್ಯಂತ ಬಾಲಿವುಡ್ ಅಭಿಮಾನಿಗಳು ಒಂದೇ ವೇದಿಕೆಯಲ್ಲಿ ಈ ಶೋವನ್ನು ಆನಂದಿಸಬಹುದಾಗಿದೆ.