ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ವೈರಲ್ ಆಗುವ ವಿಡಿಯೋಗಳು ತುಂಬಾನೇ ಮುದ್ದಾಗಿರುತ್ತವೆ. ಸಂಗಾತಿ ಆಯ್ಕೆಯ ಬಗ್ಗೆ ಒಂದು ವಿಡಿಯೋ ವೈರಲ್ ಆಗಿದೆ.
ಅಂದ ಚಂದ ಮಾಸಿದ ನಂತರವೂ ದೇವತೆಯಂತೆ ನೋಡಿಕೊಳ್ಳುವ ಹುಡುಗನನ್ನು ಆರಿಸಿ ಎಂದು ಇಲ್ಲಿ ಹೇಳಲಾಗಿದೆ. ವಿಡಿಯೋದಲ್ಲಿ ಮೆಟ್ರೋದಲ್ಲಿ ಕುಳಿತ ಅಜ್ಜ ಅಜ್ಜಿ ಇದ್ದಾರೆ. ಅಜ್ಜಿ ಅಜ್ಜನ ತೊಡೆ ಮೇಲೆ ತಲೆಯಿಟ್ಟು ನಿದ್ದೆ ಮಾಡುತ್ತಾರೆ.
ನೋಡಿ ಆರಿಸಿಕೊಳ್ಳಿ, ಜೀವನದ ಪಯಣ ದೊಡ್ಡದಿದೆ ಎಂದು ಕ್ಯಾಪ್ಷನ್ ಕೂಡ ನೀಡಲಾಗಿದೆ. ಕೊನೆವರೆಗೂ ಗಂಡ ಹೆಂಡತಿಗೆ ಆಗಬೇಕು, ಹಾಗೆ ಹೆಂಡತಿ ಗಂಡನಿಗೆ. ಈ ಸಂದೇಶವನ್ನು ವಿಡಿಯೋ ನೀಡುತ್ತಿದೆ.
VIRAL | ಇದೇ ಅಲ್ವಾ ಪ್ರೀತಿ ಅಂದ್ರೆ? ಮೆಟ್ರೋದಲ್ಲಿ ಪತಿಯ ಮಡಿಲಲ್ಲಿ ಮಲಗಿದ ಪತ್ನಿ
