Friday, September 26, 2025

SHOCKING | ಚರಂಡಿಯಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟ ನಾಲ್ಕರ ಬಾಲಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳು ದೊಡ್ಡವರು ಏನಾಗೋದಿಲ್ಲ ಎಂದು ಅವರನ್ನು ನೋಡದೇ ಬಿಡಬೇಡಿ! ಮಕ್ಕಳು ಎಷ್ಟು ದೊಡ್ಡವರಾದರೂ ಅವರು ಮಕ್ಕಳೇ, ಸ್ವಲ್ಪ ಸಮಯ ಅವರ ಮೇಲೆ ನಿಗಾ ಇಟ್ಟಿಲ್ಲ ಎಂದಾದರೆ ಅನಾಹುತ ಸಂಭವಿಸಬಹುದು.

ಬಾಲಕನೊಬ್ಬ ನೀರು ತುಂಬಿದ ಚರಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕರೇಕುಪ್ಪ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕ ಚರಂಡಿಯಲ್ಲಿ ಬಿದ್ದು, ಒದ್ದಾಡಿ ಪ್ರಾಣಬಿಟ್ಟಿದ್ದಾನೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ನಿನ್ನೆ ಸಂಜೆ ಆಟವಾಡುತ್ತ ತಾತನ ಮನೆ ಕಡೆಗೆ ಹೊರಟಿದ್ದ ಬಾಲಕ, ಕಾಲು ಜಾರಿ ಚರಂಡಿ ನೀರು ತುಂಬಿದ ಗುಂಡಿಗೆ ಬಿದ್ದಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದ ಅರವಿಂದನನ್ನು ಪೋಷಕರು ಗಾಬರಿಗೊಂಡು ಹುಡುಕಲು ಆರಂಭಿಸಿದ್ದಾರೆ. ಬಾಲಕನ ದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ಕೂಡಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನ ಪೋಷಕರು ಜಿಂದಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಬಾಲಕ ಚರಂಡಿ ಗುಂಡಿಯಲ್ಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. 

ಮಗುವಿನ ಸಾವಿಗೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾದ ಸಮಯದಲ್ಲಿ ತಮ್ಮ ವ್ಯಾಪ್ತಿಗೆ ಬರುವ ಕಾರ್ಯಗಳನ್ನು ಮಾಡದೇ ಅಸಡ್ಡೆ ತೋರಿರುವುದೇ ಈ ಘಟನೆಗೆ ಕಾರನ ಎಂದಿದ್ದಾರೆ. ಮಗು ಚರಂಡಿಯಲ್ಲಿ ಬಿದ್ದು ಒದ್ದಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತೋರಣಗಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ