Friday, September 26, 2025

ಕುಸಿದು ಬೀಳುವಂತಿದೆ ದೊಡ್ಡ ಕಟ್ಟಡ: ಹೆದರಿದ ಸಿಲಿಕಾನ್‌ ಸಿಟಿ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದ್ದು, ಕಟ್ಟಡ ಒಂದು ಬದಿಗೆ ವಾಲಿಕೊಂಡಿರುವುದು ಅಕ್ಕಪಕ್ಕದ ನಿವಾಸಿಗಳಲ್ಲಿ ಭೀತಿ ಸೃಷ್ಟಿಸಿದೆ.

ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳ ಹಾವಳಿ ಇನ್ನೂ ನಿಂತಿಲ್ಲ, ಈ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ ಕೊರಮಂಗಲದಲ್ಲಿ ಸಂಪೂರ್ಣವಾಗಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದ್ದ ಕಟ್ಟಡವೊಂದು ಕುಸಿಯುವ ಭೀತಿ ಎದುರಾಗಿದೆ.

ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲದ 1ನೇ ಬ್ಲಾಕ್ ನ ವೆಂಕಟಾಪುರದಲ್ಲಿ15X50 ಅಡಿ ಅಥವಾ 750 ಚದರ ಅಡಿ ಜಾಗದಲ್ಲಿ ನಿರ್ಮಾಣವಾಗಿರುವ ಕಟ್ಟಡ ವಾಲಿಕೊಂಡಿದೆ. ನೆಲಮಹಡಿ ಸೇರಿದಂತೆ 5 ಅಂತಸ್ತುಗಳ ಕಟ್ಟಡ ಕುಸಿಯುವ ಆತಂಕ ಎದುರಾಗಿದೆ.

5 ಅಂತಸ್ತಿನ ಕಟ್ಟಡವೊಂದು ಒಂದು ಬದಿಗೆ ವಾಲಿದ್ದು, ನೆರೆಹೊರೆಯವರು ಮತ್ತು ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನಿಯಮ ಮೀರಿ ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದು, ಕಟ್ಟಡ ವಾಲಿಕೊಳ್ಳುತ್ತಲೇ ಕಟ್ಟಡದ ಮಾಲೀಕರು ತಾವೇ ಅದನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಕಟ್ಟಡದ ಅಡಿಪಾಯ ಮತ್ತು ಪಿಲ್ಲರ್ ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಟ್ಟಡ ಒಂದು ಬದಿಗೆ ವಾಲಿಕೊಂಡಿದೆ. ಇನ್ನು ವಿಚಾರ ತಿಳಿಯುತ್ತಳೇ ಸ್ಥಳಕ್ಕೆ ದೌಡಾಯಿಸಿರುವ ಮಡಿವಾಳ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಅಂತೆಯೇ ಸ್ಥಳಕ್ಕಾಗಮಿಸಿದ ಸ್ಥಳೀಯ ಬಿಜಿಎ ಅಧಿಕಾರಿಗಳು ಜೆಸಿಬಿ ಮೂಲಕ ಕಟ್ಟಡ ತೆರವು ಮಾಡುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ