ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯ ಸರಕಾರದ ಲಾಟರಿ ಇಲಾಖೆಯು ನಡೆಸುವ ಓಣಂ ಬಂಪರ್ ಡ್ರಾ ದಿನಾಂಕವನ್ನು ಮುಂದೂಡಲಾಗಿದೆ. ಸೆ.27ರಂದು ಮಧ್ಯಾಹ್ನ 2 ಗಂಟೆಗೆ ತಿರುವನಂತಪುರದಲ್ಲಿ ಬಂಪರ್ ಲಾಟರಿ ಡ್ರಾ ನಡೆಸಲಾಗುವುದು ಎಂದು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಡ್ರಾ ದಿನಾಂಕವನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ ಎಂದು ಸರಕಾರಿ ವರದಿಗಳು ತಿಳಿಸಿವೆ.
ಟಿಕೆಟ್ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಹಿನ್ನೆಲೆಯಲ್ಲಿ ಡ್ರಾ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.
ಪ್ರಥಮ ಬಹುಮಾನ 25 ಕೋಟಿ ರೂ., ದ್ವಿತೀಯ ಬಹುಮಾನ 20 ಮಂದಿಗೆ ತಲಾ ಒಂದು ಕೋಟಿ ರೂ., ತೃತೀಯ ಬಹುಮಾನ 20 ಜನರಿಗೆ ತಲಾ 50 ಲಕ್ಷ ರೂ. ಹಾಗೂ ಇನ್ನಿತರ ಬಹುಮಾನಗಳನ್ನು ನಿಗದಿಪಡಿಸಲಾಗಿದೆ. ಟಿಕೆಟ್ ಬೆಲೆ 500 ರೂ. ಆಗಿದೆ.