ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11 ಕೆವಿ ವಿಜಯನಗರ ವಿದ್ಯುತ್ ಕೇಂದ್ರ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬಸವೇಶ್ವರನಗರ, ವಿಜಯನಗರ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಆರ್.ಪಿ.ಸಿ.ಲೇಔಟ್, ಪ್ರಶಾಂತನಗರ, ಎಂ.ಸಿ.ಲೇಔಟ್, ಮಾರೇನಹಳ್ಳಿ, ಹೊಸಹಳ್ಳಿ, ತಿಮ್ಮೇನಹಳ್ಳಿ, ವಿನಾಯಕ ಲೇಔಟ್, ಕಾವೇರಿಪುರ, ರಂಗನಾಥಪುರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ನಾಗರಬಾವಿ, ಸಿದ್ದಯ್ಯ ಪುರಾಣಿಕ್ ರೋಡ್, ಕೆ.ಹೆಚ್.ಬಿ. ಕಾಲೋನಿ, ಮಾಗಡಿ ಮೈನೆ ರೋಡ್, ಹೆಚ್.ಚಿ.ಆರ್. ಲೇಔಟ್, ಅಗ್ರಹಾರ ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
220/66/11 ಕೆವಿ ಎಸ್ಆರ್ಎಸ್ ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ಕೂಡ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.
ಪೀಣ್ಯ 10ನೇ ಮುಖ್ಯರಸ್ತೆ, 11ನೇ ಮುಖ್ಯರಸ್ತೆ, ಉಡುಪಿ ಹೋಟೆಲ್ ಸುತ್ತಮುತ್ತ, ಐಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮೀದೇವಿ ನಗರ, ಲಗ್ಗೆರೆ ಹಳೆ ಗ್ರಾಮ, ಲವ ಕುಶಾನಗರ, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6ನೇ, 7ನೇ, 8ನೇ, 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿವಿಎಸ್ ಕ್ರಾಸ್ ರಸ್ತೆ ಬಳಿ, ಇಸ್ರೋ 1ನೇ, 2ನೇ ಕ್ರಾಸ್, 1ನೇ ಹಂತದ ಪಿಐಎ ಏರಿಯಾ ಮತ್ತು ಯಶ್ವತ್ಥಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.