Saturday, September 27, 2025

ಬಿಕಿನಿ ಎಐ ಫೋಟೋ ವೈರಲ್: ನಟಿ ಸಾಯಿಪಲ್ಲವಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತ್ತೀಚೆಗೆ ನಟಿ ಸಾಯಿಪಲ್ಲವಿ ಬಿಕಿನಿ ಧರಿಸಿರುವ ಫೋಟೋ ವೈರಲ್ ಆಗಿತ್ತು.ಸಾಯಿ ಪಲ್ಲವಿ ಬಿಕಿನಿ ಧರಿಸದ್ರಾ ಎಂದು ಅಭಿಮಾನಿಗಳು ಬಾಯಿಬಿಟ್ಟರು, ಆದರೆ ಕೆಲವರು ಬೀಚ್‌ನಲ್ಲಿ ನೀರಿನಲ್ಲಿ ಆಡೋದಕ್ಕೆ ಸೀರೆ ಉಟ್ಕೊಳಕ್ಕೆ ಆಗತ್ತಾ ಎಂದು ಕಮೆಂಟ್‌ ಮಾಡಿದ್ದರು.

ಆರಂಭದಲ್ಲಿ ಅಸಲಿಯಾ ನಕಲಿಯಾ ಎಂಬ ಹುಡುಕಾಟದಲ್ಲಿದ್ದ ಫ್ಯಾನ್ಸ್‌ ಗೆ ಇದು ಎಐ ಫೋಟೋ ಅನ್ನೋದು ಬಳಿಕ ತಿಳಿದುಬಂತು. ಇದೀಗ ಇದೇ ವೈರಲ್ ಫೋಟೋ ವಿಚಾರಕ್ಕೆ ಸಾಯಿಪಲ್ಲವಿ ಪರೋಕ್ಷವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರವಾಸದ ಅಷ್ಟೂ ವೀಡಿಯೋ ಫೋಟೋಗಳನ್ನ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಇಲ್ಲಿ ಕಾಣಿಸುವ ಫೋಟೋಗಳು ಎಐ ಫೋಟೋಗಳಲ್ಲ ಎಂದು ಹೇಳುವ ಮೂಲಕ ವೈರಲ್ ಮಾಡಿರೋ ಎಐ ಫೋಟೋ ದುರುಳರಿಗೆ ಟಾಂಗ್ ಕೊಟ್ಟಿದ್ದಾರೆ.

ಸಾಯಿಪಲ್ಲವಿ ಇತ್ತೀಚೆಗೆ ತಂಗಿ ಪೂಜಾ ಹಾಗೂ ಕುಟುಂಬಸ್ಥರ ಜೊತೆ ಪ್ರವಾಸಕ್ಕೆ ತೆರಳಿದ್ರು. ಅಲ್ಲಿನ ಒಂದಷ್ಟು ಫೋಟೋಗಳನ್ನ ಪೂಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಕ್ಕ ಸಾಯಿಪಲ್ಲವಿ ಜೊತೆ ಪೂಜಾ ಬೀಚ್‌ನಲ್ಲಿ ಸಮಯ ಕಳೆದಿರುವ ಫೋಟೋಗಳನ್ನ ಹಂಚಿಕೊಂಡಿದ್ದು ಅಕ್ಕ, ತಂಗಿ ಇಬ್ಬರೂ ಈಜುಡುಗೆ ಧರಿಸಿರುವ ಫೋಟೋವನ್ನೂ ಹಂಚಿಕೊಂಡಿದ್ದರು. ಆದರೆ ಈಜುಡುಗೆಗೂ ಬಿಕಿನಿಗೂ ವ್ಯತ್ಯಾಸ ಇರುತ್ತೆ. ಇದೇ ಫೋಟೋಗಳನ್ನ ಇಟ್ಟುಕೊಂಡು ಸಾಯಿಪಲ್ಲವಿ ಬಿಕಿನಿ ಧರಿಸಿ ನಿಂತಿರುವಂತೆ ಎಐ ಫೋಟೋಗಳನ್ನ ಜನರೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು.

ಸಾಯಿಪಲ್ಲವಿ ಇದುವರೆಗೂ ಹೀಗೆ ಯಾವತ್ತೂ ಕಾಣಿಸ್ಕೊಂಡಿಲ್ಲ. ಹೀಗಾಗಿ ಕೆಲವರ ಅಸಮಾಧಾನಕ್ಕೆ ಕಾರಣವಾಗಿದ್ದರು. ಜೊತೆಗೆ ಸಾಯಿಪಲ್ಲವಿ ರಾಮಾಯಣದಲ್ಲಿ ಸೀತೆ ಪಾತ್ರ ಮಾಡುತ್ತಿರುವ ಬಗ್ಗೆಯೂ ಅದೇ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗಿತ್ತು.

ತಂತ್ರಜ್ಞಾನದ ದುರುಪಯೋಗಕ್ಕೆ ಬೇಸರಿಸಿಕೊಂಡ ಸಾಯಿಪಲ್ಲವಿ ಇದೀಗ ಏನನ್ನೂ ಹೇಳದೆ ಪ್ರವಾಸದ ನಿಜವಾದ ಚಿತ್ರಣ ಹೇಗಿತ್ತು ಅನ್ನೋದನ್ನ ಎಳೆ ಎಳೆಯಾಗಿ ದರ್ಶನ ಮಾಡಿಸಿದ್ದಾರೆ. ಇದ್ಯಾವ್ದೂ ಎಐ ಫೋಟೋಗಳಲ್ಲ ಅನ್ನೋದ್ರ ಮೂಲಕ ಸುಳ್ಳು ವದಂತಿ ಹಬ್ಬಿಸಿ ಸಾಯಿಪಲ್ಲವಿ ಬಗ್ಗೆ ಕೀಳರಿಮೆ ಮೂಡಿಸುವ ಪ್ರಯತ್ನದಲ್ಲಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ.