ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿಗಣತಿಗೆಂದು ನೀವು ನೀಡುವ ಮಾಹಿತಿ ಸೇಫ್ ಇಲ್ಲ. ಈ ಜಾತಿಗಣತಿಯನ್ನು ದಯವಿಟ್ಟು ಎಲ್ಲರೂ ಬಹಿಷ್ಕರಿಸಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಾನು ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ. ನಂಗೆ ನನ್ನ ಮಾಹಿತಿ ಸುರಕ್ಷಿತವಾಗಿರುತ್ತೆ ಅನ್ನೋ ನಂಬಿಕೆ ಇಲ್ಲ. ಹೀಗಾಗಿ, ಸರ್ಕಾರದ ಮೇಲೆ ನಂಬಿಕೆ ಇರದೇ ಇರೋದ್ರಿಂದ ಇದರಲ್ಲಿ ಪಾಲ್ಗೊಳ್ಳಲ್ಲ. ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಜಾತಿ ಜಾತಿ ಮಧ್ಯೆ ಗಲಾಟೆ ತರಲು ಮಾತ್ರ ಇದನ್ನು ಮಾಡುತ್ತಿದ್ದಾರೆ. ದಯವಿಟ್ಟು ನೀವು ಇದರಲ್ಲಿ ಪಾಲ್ಗೊಳ್ಳಬೇಡಿ ಎಂದು ತಿಳಿಸಿದ್ದಾರೆ.
ಪ್ಲೀಸ್ ಜಾತಿಗಣತಿ ಬಹಿಷ್ಕರಿಸಿ, ನಿಮ್ಮ ಮಾಹಿತಿಗಳು ಸೇಫ್ ಇಲ್ಲ: ತೇಜಸ್ವಿ ಸೂರ್ಯ
