ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ದಿಢೀರ್ ಭೇಟಿ ನೀಡಿದ ಎಡಿಜಿಪಿ ಬಿ. ದಯಾನಂದ್ ಅವರು ನಟ ದರ್ಶನ್‌ಗೆ ಜೈಲಿನಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧದಲ್ಲಿ ಕೋರ್ಟ್ ಸೂಚನೆಯಂತೆ ದರ್ಶನ್‌ಗೆ ನೀಡಿದ ಅನುಕೂಲಗಳ ಬಗ್ಗೆ ಸೂಕ್ಷ್ಮ ಮಾಹಿತಿ ಸಂಗ್ರಹಿಸುವುದೇ ಈ ಭೇಟಿಯ ಉದ್ದೇಶವಾಗಿದೆ.
ಸೆಪ್ಟೆಂಬರ್ 25 ರಂದು ನಡೆದ ಸೆಷನ್ಸ್ ಕೋರ್ಟ್ ವಿಚಾರಣೆಯಲ್ಲಿ ಜೈಲು ಅಧಿಕಾರಿಗಳ ಹಾಜರಿಗಾಗಿ ನ್ಯಾಯಾಧೀಶರು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಎಡಿಜಿಪಿ ಬಿ. ದಯಾನಂದ್ ಅವರು ಜೈಲಿಗೆ ಭೇಟಿ ನೀಡಿ ದರ್ಶನ್ ಸೆಲ್ ಬಳಿ ನಿಯೋಜಿತ ಸಿಬ್ಬಂದಿ ಬಾಡಿ-ವೋನ್ ಕ್ಯಾಮೆರಾ ದೃಶ್ಯಾವಳಿ, ಬ್ಯಾರಕ್‌ಗಳಿಗೆ ಹಾಕಲಾದ ಸಿಸಿಟಿವಿ ವಿಡಿಯೋಗಳ ಪರಿಶೀಲನೆ ನಡೆಸಿದರು.
ಜೈಲಿನ ಮ್ಯಾನ್ಯುಯಲ್ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ, ಎಲ್ಲಾ ಆರೋಪಿಗಳಿಗೆ ಕಾನೂನು ಮತ್ತು ನಿಯಮಾವಳಿಯ ಪ್ರಕಾರ ಸೌಲಭ್ಯ ನೀಡಬೇಕೆಂಬ ಖಡಕ್ ಸೂಚನೆ ಬಿ. ದಯಾನಂದ್ ನೀಡಿದರು.