ಟಾಲಿವುಡ್‌ನಲ್ಲಿ ಕಾಂತಾರ ಬಾಯ್ಕಾಟ್ ಸಮಸ್ಯೆ ಬಗೆಹರಿಸಿದ್ದಕ್ಕೆ ಪವನ್ ಕಲ್ಯಾಣ್‌ಗೆ ಹೊಂಬಾಳೆ ಫಿಲಂಸ್ ಧನ್ಯವಾದ ಅರ್ಪಿಸಿದೆ. ನಟ ರಿಷಭ್ ಶೆಟ್ಟಿ ಹೈದರಾಬಾದ್‌ನಲ್ಲಿ ತೆಲುಗುವಿನಲ್ಲಲ್ಲದೆ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಈವೆಂಟ್ ವೇಳೆ ಕನ್ನಡ ಮಾತನಾಡಿದ್ದಕ್ಕೆ ಕೆಲವರು ಗರಂ ಆಗಿದ್ದರು. ಇದರಿಂದಾಗಿ ಬಾಯ್ಕಾಟ್ ಕಾಂತಾರ ವೈರಲ್ ಆಗಿತ್ತು.
ಆದರೆ ಈ ಸಮಸ್ಯೆ ಬಗೆಹರಿದಿದೆ. ರಿಷಭ್ ಮನಸ್ಸಿನ ಮಾತು ಬೇರೆ ಯಾವ ಭಾಷೆಯಲ್ಲಿಯೂ ಬರೋದಿಲ್ಲ ಎಂದು ಕ್ಲಾರಿಟಿ ನೀಡಿದ್ದಾರೆ. ಇತ್ತ ಬಿಗುವಿನ ಪರಿಸ್ಥಿತಿಯನ್ನು ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ತಿಳಿಗೊಳಿಸಿದ್ದಾರೆ. ಆಂಧ್ರದಲ್ಲಿ ಕಾಂತಾರ ಚಿತ್ರ ಸುಲಭವಾಗಿ ರಿಲೀಸ್ ಆಗುವಂತೆ ದಾರಿ ಮಾಡಿಕೊಟ್ಟಿದ್ದಾರೆ. ಹೀಗಾಗಿ ಕಾಂತಾರ ಚಿತ್ರತಂಡ ಪವನ್ ಕಲ್ಯಾಣ್‌ಗೆ ಅಧಿಕೃತವಾಗಿ ಧನ್ಯವಾದ ಅರ್ಪಿಸಿದೆ.
ಕಾಂತಾರ ಚಿತ್ರಕ್ಕೆ ತಮ್ಮ ರಾಜ್ಯದಲ್ಲಿ ಎದುರಾಗುತ್ತಿರುವ ಸಮಸ್ಯೆಯನ್ನ ತಡೆದ ಪವನ್ ಕಲ್ಯಾಣ್ ರಾಜ್ಯದ ಜನತೆಗೆ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಎದುರಾಗುವ ಪರಿಸ್ಥಿತಿ ಮುಂದಿಟ್ಟುಕೊಂಡು ಅವರ ಚಿತ್ರಗಳಲ್ಲಿ ನಾವು ಇಲ್ಲಿ ತೊಂದರೆ ಕೊಡುವುದು ಸರಿಯಿಲ್ಲ. ನಾವು ರಾಷ್ಟ್ರೀಯ ಭಾವನೆಯಿಂದ ಹಾಗೂ ಹೃದಯದಿಂದ ನೋಡಬೇಕು. ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ಕಿಚ್ಚ ಸುದೀಪ್, ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಿಷಬ್ ಶೆಟ್ಟಿವರೆಗೂ ತೆಲುಗು ಜನರು ಬೆಂಬಲ ಕೊಟ್ಟಿದ್ದಾರೆ. ನಾವು ಸಹೋದರತ್ವದಿಂದ ಮುಂದುವರೆಯಬೇಕು ಎಂದು ಕರೆ ಕೊಟ್ಟಿದ್ದಾರೆ.
ಟಾಲಿವುಡ್‌ನಲ್ಲಿ ಕಾಂತಾರ ಬಾಯ್‌ಕಾಟ್! ಅಂತೂ ಸಮಸ್ಯೆ ಬಗೆಹರಿದುಬಿಡ್ತು
