Sunday, October 5, 2025

ಸ್ತನ ಕ್ಯಾನ್ಸರ್‌ಗೆ ಖ್ಯಾತ ಕಿರುತೆರೆ ನಟಿ ಕಮಲಶ್ರೀ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗಟ್ಟಿಮೇಳ, ಕಾವೇರಿ ಕನ್ನಡ ಮೀಡಿಯಂ ಸೇರಿ ಹಲವು ಧಾರಾವಾಹಿಗಳಲ್ಲಿ ಮಿಂಚಿದ್ದ ಹಿರಿಯ ನಟಿ ಕಮಲಶ್ರೀ ನಿಧನರಾಗಿದ್ದಾರೆ. 

ಚಿತ್ರರಂಗದ ಹಿರಿಯ ನಟಿ ಕಮಲಶ್ರೀ ಅವರು 70ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನಿನ್ನೆ ಕಮಲಶ್ರೀ ಇಹಲೋಕ ತ್ಯಜಿಸಿದ್ದು, ಇಡೀ ಕನ್ನಡ ಕಿರುತೆರೆ ಕಂಬನಿ ಮಿಡಿದಿದೆ.

ಕೊನೆಯ ದಿನಗಳಲ್ಲಿ ಆರ್ಥಿಕ ಕಷ್ಟದೊಂದಿಗೆ ಹೋರಾಡುತ್ತಿದ್ದ ಈ ನಟಿ, ಗಂಡ, ಮಕ್ಕಳಿಲ್ಲದೇ ಏಕಾಂಗಿಯಾಗಿ ಬದುಕುತ್ತಿದ್ದರು. ಕೆಲ ವರ್ಷಗಳಿಂದ ಕ್ಯಾನ್ಸರ್‌ ಬಾಧಿತರಾಗಿದ್ದು, ಚೇತರಿಕೆ ಅಸಾಧ್ಯವಾಗಿತ್ತು.

ಕಮಲಶ್ರೀ ಅವರು ಕನ್ನಡ ಧಾರಾವಾಹಿ ಮತ್ತು ಸಿನಿಮಾ ಚಿತ್ರರಂಗದಲ್ಲಿ ದೀರ್ಘಕಾಲ ನಟಿಸಿದ್ದರು. ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ವೇದಾಂತ್ ಅಜ್ಜಿ ಪಾತ್ರದ ಮೂಲಕ ಅವರು ಎಲ್ಲರ ಹೃದಯ ಗೆದ್ದರು.ಈ ಪಾತ್ರವು ಅವರನ್ನು ಹಿರಿಯ ನಟಿಯಾಗಿ ಮಿಂಚುವ ಅವಕಾಶ  ನೀಡಿತು. 

ಇದಲ್ಲದೆ, ‘ಕಾವೇರಿ ಕನ್ನಡ ಮೀಡಿಯಂ’, ‘ಪತ್ತೆದಾರಿ ಪ್ರತಿಭಾ’ ಮುಂತಾದ ಧಾರಾವಾಹಿಗಳಲ್ಲಿ ಸಹ ನಟಿಸಿ ಪ್ರೇಕ್ಷಕರನ್ನು ಆಕರ್ಷಿಸಿದ್ದರು. ಸಿನಿಮಾ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ ಬ್ಯಾನರ್‌ನ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.