ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮೈಸೂರು ಅರಮನೆಯಲ್ಲಿ ವೈಭವದಿಂದ ಆಯುಧ ಪೂಜೆ ನಡೆದಿದೆ. ಮೈಸೂರು ರಾಜಸಂಸ್ಥಾನ ಪರಂಪರೆಯಂತೆ ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜಾ ಕೈಂಕರ್ಯ ನೆರವೇರಿಸಿದರು.
ಬೆಳಗ್ಗೆ ಅರಮನೆಯಲ್ಲಿ ಚಂಡಿಕಾ ಹೋಮ ನಡೆದಿದೆ. ‘ಆಯುಧ ಪೂಜೆ’ಗೆ ರಾಜ ವೈಭವ, ಮೆರವಣಿಗೆಯಲ್ಲಿ ರಾಜಮನೆತನದ ಆನೆ, ಹಸು ಮತ್ತು ಕುದುರೆಗಳು ಭಾಗವಹಿಸಿವೆ.
ಮೈಸೂರು ಅರಮನೆಯಲ್ಲಿ ಆಯುಧಪೂಜೆ ಸಂಭ್ರಮ ಮಾಡಿದೆ. ರಾಜವಂಶಸ್ಥ ಯದುವೀರರಿಂದ ಪೂಜೆ, ಪೂರ್ಣಾಹುತಿ ಕಾರ್ಯ ನಡೆದಿದೆ. ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಆಯುಧಗಳನ್ನು ಪಲ್ಲಕ್ಕಿಯಲ್ಲಿ ರವಾನಿಸಲಾಗಿದೆ. ಶುಚಿಗೊಳಿಸಿದ ಬಳಿಕ ಆಯುಧಗಳನ್ನ ಪಲ್ಲಕಿಯಲ್ಲಿ ವಾಪಸ್ ಅರಮನೆಗೆ ರವಾನೆ ಮಾಡಲಾಗಿದೆ. ಅರಮನೆಯ ಆನೆ ಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಣೆ ಕಾರ್ಯ ನಡೆದಿದೆ.
ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಯದುವೀರರು ಪೂಜೆ ಸಲ್ಲಿಸಿದರು. ಆ ನಂತರ ರಾಜಪುರೋಹಿತರ ಮಾರ್ಗದರ್ಶನದಂತೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ನೆರವೇರಿಸಿದ್ದಾರೆ. ಯದುವೀರರಿಂದ ಪೂಜಾ ಕೈಕಾರ್ಯ ನಡೆದಿದೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸುಗಳಿಗೂ ಪೂಜೆ ಸಲ್ಲಿಸಿದ ಬಳಿಕ ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ನೆರವೇರಿದೆ.
ಸೋಮೇಶ್ವರ ದೇಗುಲಕ್ಕೆ ಪಟ್ಟದ ಕತ್ತಿಯ ಜೊತೆಗೆ ಪಲ್ಲಕ್ಕಿ ಹೊರಟಿತು. ಪಟ್ಟದ ಆನೆಗಳು. ಪಟ್ಟದ ಕುದುರೆಗಳ ಜೊತೆಗೆ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗಿದೆ.