Tuesday, October 7, 2025

ನಂಬರ್ ಪ್ಲೇಟ್ ಮರೆಮಾಚಬೇಡಿ​​: 1 ವಾರದಲ್ಲಿ 1,200 ಬೈಕ್‌ ಸೀಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಂಬರ್ ಪ್ಲೇಟ್ ಮರೆಮಾಚಿ ಬೈಕ್ ಓಡಿಸ್ತೀರಾ? ಹಾಗಿದ್ರೆ ಇನ್ಮುಂದೆ ಹುಷಾರಾಗಿರಿ. ಅಪ್ಪಿತಪ್ಪಿ ನಂಬರ್‌ ಪ್ಲೇಟ್‌ ಕಾಣಿಸದಿದರೆ ಕ್ರಿಮಿನಲ್ ಕೇಸ್ ಬೀಳೋದು ಪಕ್ಕಾ. ಅಂದಹಾಗೇ ಅನ್ನೋದರ ಡಿಟೇಲ್ಸ್‌ ಇಲ್ಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ‌ ವಿಭಾಗ ಡಿಸಿಪಿ‌ ಎಸ್. ಗಿರೀಶ್, ನಂಬರ್ ಪ್ಲೇಟ್ ಕಾಣದಂತೆ ಮಾಡಲು ವಿವಿಧ ರೀತಿಯ ತಪ್ಪುಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ನಂಬರ್ ಪ್ಲೇಟ್ ಇಲ್ಲದೇ ಇರೋದು, ಹಿಂದೆ ಇದ್ದರೆ ಮುಂದೆ, ಮುಂದೆ ಇದ್ದರೆ ಹಿಂದೆ ನಂಬರ್ ಪ್ಲೇಟ್ ಇಲ್ಲದೇ ಇರೋದು. ಕೆಲವು ವಾಹನಗಳನ್ನು ನಂಬರ್ ಪ್ಲೇಟ್ ಇಲ್ಲದೇ ಚಲಾಯಿಸುವುದು ಅಥವಾ ಫೇಕ್ ನಂಬರ್ ಪ್ಲೇಟ್ ಹಾಕಿಕೊಂಡು ಓಡಾಡುವವರು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಗರದಲ್ಲಿ ರಾತ್ರಿ ವೇಳೆ ವಾಹನಗಳ ತಪಾಸಣೆ ಕಟ್ಟುನಿಟ್ಟಾಗಿ ನಡೆಸಲಾಗ್ತಿದೆ. ಈ ವೇಳೆ ನಕಲಿ ನಂಬರ್ ಪ್ಲೇಟ್‌, ನಂಬರ್ ಪ್ಲೇಟ್ ಮಡಚಿರುವುದು ಗೊತ್ತಾಗಿದೆ.. ಕಳೆದ ಒಂದು ವಾರದಲ್ಲಿ 1,200 ಬೈಕ್‌ಗಳನ್ನ ಸೀಜ್‌ ಕೂಡ ಮಾಡ್ಲಾಗಿದೆ. ಇದ್ರಲ್ಲಿ ನಕಲಿ‌‌ ನಂಬರ್ ಪ್ಲೇಟ್ ಬಳಸಿ ವಾಹನ ಚಲಾಯಿಸ್ತಿದ್ರು ಅನ್ನೋದು ಗೊತ್ತಾಗಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

error: Content is protected !!