ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಕುಟುಂಬದಲ್ಲಿ ದಸರಾ ಹಬ್ಬದ ಸಂಭ್ರಮ. ನೂರಾರು ಐಶಾರಾಮಿ ಕಾರುಗಳ ಸಾರಥಿ ದರ್ಶನ್ ಈಗ ಜೈಲಲ್ಲಿದ್ದಾರೆ. ಪ್ರತಿ ವರ್ಷ ದರ್ಶನ್ ಆರ್‌ಆರ್ ನಗರದ ತಮ್ಮ ನಿವಾಸದ ರಸ್ತೆಯುದ್ದಕ್ಕೂ ಕಾರುಗಳನ್ನ ನಿಲ್ಲಿಸಿ ಆಯುಧ ಪೂಜೆ ಮಾಡುತ್ತಿದ್ದರು. ಆದರೆ ಕಳೆದೆರಡು ವರ್ಷಗಳಿಂದ ದರ್ಶನ್ ಜೈಲಲ್ಲೇ ದಸರಾ ಹಬ್ಬ ಮಾಡುವಂತಾಗಿದೆ. ಆದರೆ ದರ್ಶನ್ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಸಂಪ್ರದಾಯದಂತೆ ಆಯುಧಪೂಜಾ ಹಬ್ಬ ಮಾಡಿದ್ದಾರೆ.
ಅಮ್ಮ ಮಗ ಇಬ್ಬರೂ ದಸರಾ ಹಬ್ಬ ಮಾಡಿರುವ ಫೋಟೋವನ್ನ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ದರ್ಶನ್ ಕಾರ್ ಪ್ರಿಯರಾಗಿದ್ದು ಐಶಾರಾಮಿ ಎಲ್ಲಾ ಬ್ರ್ಯಾಂಡ್ ಕಾರ್‌ಗಳನ್ನ ಹೊಂದಿದ್ದಾರೆ. ಆದರೆ ಸದ್ಯದ ಅವರ ಪರಿಸ್ಥಿತಿ ಹಾಸಿಗೆ ದಿಂಬಿಗಾಗಿ ಪರದಾಡುವಂತಾಗಿದೆ.