Tuesday, October 7, 2025

ಮಹಿಳಾ ಏಕದಿನ ವಿಶ್ವಕಪ್: ಆಪ್ರಿಕಾ ವಿರುದ್ಧ ಗೆದ್ದು ಸಂಭ್ರಮಿಸಿದ ಇಂಗ್ಲೆಂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಏಕದಿನ ವಿಶ್ವಕಪ್​​ನ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ ಜಯದ ನಗೆ ಬೀರಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಪ್ರಿಕಾ ಮಹಿಳಾ ತಂಡ ಊಹೆಗೂ ನಿಲುಕದ ಕಳಪೆ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ಸ್ಪಿನ್ ದಾಳಿಗೆ ನಲುಕಿದ ಆಫ್ರಿಕಾ ತಂಡ ಕೇವಲ 20.4 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 69 ರನ್​ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 15ನೇ ಓವರ್​ನಲ್ಲೇ ಜಯದ ನಗೆ ಬೀರಿತು.

ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮ್ಯಾನ್ ಗಳು ಇಂಗ್ಲೆಂಡ್​ನ ಎಡಗೈ ಸ್ಪಿನ್ನರ್ ಲಿನ್ಸೆ ಸ್ಮಿತ್ ಅವರ ಸ್ಪಿನ್ ಜಾದೂ ಮುಂದೆ ಅಕ್ಷರಶಃ ಶರಣಾಯಿತು. ಇನ್ನಿಂಗ್ಸ್‌ನ ಎರಡನೇ ಓವರ್‌ನಿಂದಲೇ ತಂಡದ ವಿಕೆಟ್​ಗಳು ಪತನಗೊಳ್ಳಲು ಪ್ರಾರಂಭಿಸಿದವು. ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೂಲ್ವಾರ್ಡ್ಟ್ 5 ರನ್​ಗೆ ವಿಕೆಟ್ ಒಪ್ಪಿಸುವ ಮೂಲಕ ತಂಡದ ಪತನವನ್ನು ಆರಂಭಿಸಿದರು. ಆ ಬಳಿಕ ನಾಲ್ಕನೇ, ಐದನೇ ಮತ್ತು ಆರನೇ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಸತತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದಾದ ಬಳಿಕವೂ ತಂಡದ ಇನ್ನಿಂಗ್ಸ್ ಚೇತರಿಸಿಕೊಳ್ಳಲಿಲ್ಲ.ಸಿನೋಲಾ ಜಾಫ್ತಾ ಮಾತ್ರ ಎರಡಂಕಿ ದಾಟಿ 22 ರನ್ ಕಲೆಹಾಕಿದ್ದನ್ನು ಬಿಟ್ಟರೆ ಉಳಿದ 10 ಆಟಗಾರ್ತಿರ ಸ್ಕೋರ್‌ ಕ್ರಮವಾಗಿ 5, 5, 2, 4, 6, 2, 3, 3, 6, 3 ರನ್ ಆಗಿತ್ತು.

error: Content is protected !!