ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್ ಇಸ್ರೇಲ್ ರಾಯಭಾರಿ ಕಚೇರಿ ಸೇರಿದಂತೆ 6 ಕಡೆಗಳಲ್ಲಿ RDX ಇಟ್ಟಿರುವುದಾಗಿ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ.
ಶುಕ್ರವಾರ ಪ್ರಾರ್ಥನೆಯ ವೇಳೆಗೆ ಸ್ಫೋಟ ಆಗುತ್ತದೆ ಎಂದು ಬೆದರಿಕೆ ಸಂದೇಶ ಬಂದಿದ್ದು, ತಕ್ಷಣವೇ ಅಲರ್ಟ್ ಆದ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಇದು ಹುಸಿ ಸಂದೇಶ ಎಂದು ಗೊತ್ತಾಗಿದೆ.
ಸೆ.22ರಂದು Cho_ramaswami@hotmail ಎಂಬ ಐಡಿಯಿಂದ ಆರು ಕಡೆಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಸಂದೇಶ ಬಂದಿದೆ. ಜೊತೆಗೆ ಹೈಕೋರ್ಟ್‌ಗೂ ಬಾಂಬ್ ಇಟ್ಟಿರುವುದಾಗಿ ಬೆದರಿಸಲಾಗಿತ್ತು. ಇಮೇಲ್ ಮಾಡಿದ ‘ರಾಮಸ್ವಾಮಿ’ಯನ್ನು ಹುಡುಕಲು ಪೊಲೀಸರು ಮುಂದಾಗಿದ್ದು, ಹಾಟ್ಮೇಲ್ಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಆದರೆ ಹಾಟ್‌ಮೇಲ್‌ನಿಂದ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ ಐಪಿ ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಈ ಸಂಬಂಧ ವಿಧಾನಸೌಧ ಹಾಗು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಬೆದರಿಕೆ ಹಾಕುತ್ತಿರುವವರು ಡಾರ್ಕ್ ವೆಬ್ ಹಾಗೂ ವಿಪಿಎನ್‌ಗಳನ್ನು ಬಳಸಿ ಗುರುತು ಸಿಗದಂತೆ ನೋಡಿಕೊಂಡಿದ್ದಾರೆ.