ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಬೆಂಗಳೂರಿನಲ್ಲಿ ಜಾತಿ ಸಮೀಕ್ಷೆ ಶುರುವಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸದಲ್ಲೂ ಸಮೀಕ್ಷೆ ನಡೆಯಿತು. ಈ ವೇಳೆ ಗಣತಿದಾರರ ಬಳಿ ಪ್ರಶ್ನೆಗಳ ವಿಚಾರಕ್ಕೆ ಡಿಸಿಎಂ ಅಸಮಾಧಾನ ಹೊರಹಾಕಿದ್ದಾರೆ.
ಪ್ರತಿ ದಿನ ಎಷ್ಟು ಮನೆಗಳ ಸಮೀಕ್ಷೆ ಮಾಡುತ್ತೀರಿ? ನನ್ನ ಮನೆಯಲ್ಲೇ 1 ಗಂಟೆ ಕೂತಿದ್ದೀರಿ. ನಿಮ್ಮ ಪ್ರಶ್ನೆಗೆ ಉತ್ತರಿಸಲು ನನಗೆ ತಾಳ್ಮೆಯಿಲ್ಲ ಎಂದು ಗರಂ ಆದರು.
ಕೈಪಿಯಲ್ಲಿರುವ ಒಂದೊಂದೇ ಪ್ರಶ್ನೆಗಳನ್ನ ಅಧಿಕಾರಿ ಕೇಳಿದರು. ಧರ್ಮ, ಜಾತಿ ಸೇರಿದಂತೆ ಪ್ರಮುಖ ಪ್ರಶ್ನೆಗಳನ್ನ ಕೇಳಲಾಗಿದೆ. ಅದರಂತೆಯೆ ಡಿಕೆ ಶಿವಕುಮಾರ್ ಸಮಾಧಾನವಾಗಿ ಉತ್ತರಿಸಿದ್ದಾರೆ. ಅವರು ಉತ್ತರಿಸಿದಂತೆಲ್ಲ ಪ್ರಶ್ನೆಗಳು ಮುಂದುವರೆಯುತ್ತಲೇ ಇದ್ದು, ಆಗ ಡಿಸಿಎಂ ಇಷ್ಟೊಂದು ಪ್ರಶ್ನೆಗಳನ್ನು ಏಕೆ ಕೇಳುತ್ತೀರಾ, ಜನರಿಗೆ ಸಮಯ ಮತ್ತು ತಾಳ್ಮೆ ಇರಲ್ಲ. ಮನೆ ಬಗ್ಗೆ ಮಾಹಿತಿ ಕೇಳಿದ ಬಳಿಕ ಜನಸಂಖ್ಯೆ ಬಗ್ಗೆ ಕೇಳಬೇಕು, ಮೊದಲು ಮನೆಯಲ್ಲಿ ಎಷ್ಟು ಜನರಿದ್ದಾರೆ ಎಂದು ಕೇಳಬೇಕಲ್ವಾ ಎಂದು ಹೇಳಿದ್ದಾರೆ.
ಗಣತಿಯಲ್ಲಿ ಮಾಹಿತಿ ಸಂಗ್ರಹದ ದಾಖಲೆ ನೋಡಿ ಇಷ್ಟೊಂದು ಪ್ರಶ್ನೆಗಳು ಇದಾವಾ? ನಾನು ಫಾರಂ ನೋಡಿರಲಿಲ್ಲ, ಜನರಿಗೆ ಉತ್ತರಿಸಲು ಅಷ್ಟೆಲ್ಲ ತಾಳ್ಮೆ ಇರಲ್ಲ. ಪ್ರೆಶ್ನೆ ಸಿಂಪಲ್ ಇರಬೇಕು ಇದು ಟೂ ಮಚ್ ಎಂದು ಅಸಮಧಾನ ವ್ಯಕ್ತಪಡಿಸಿದರು. ಪ್ರಶ್ನೆ ಸಿಂಪಲ್ ಮಾಡ್ರಿ ಇದಕ್ಕೆಲ್ಲ ಯಾರು ಉತ್ತರ ಕೊಡ್ತಾರೆ. ಕೋಳಿ, ದನ, ಕುರಿ, ಮೇಕೆ, ಜೇನು ಸಾಕಿದ್ಯಾ? ವಿಮೆ ಮಾಡಿದ್ಯಾ? ಎಲ್ಲಾ ಜನ ಉತ್ತರ ಕೊಡ್ತಾರಾ ನಡಿ ಅಂತಾರೆ ಎಂದು ಅಧಿಕಾರಿಗಳ ಬಳಿ ಅಸಮಧಾನ ವ್ಯಕ್ತಪಡಿಸಿದ್ದಾರೆ. 22 ನಿಮಿಷದಲ್ಲಿ ಸರ್ವೆ ಆಗುತ್ತೆ ಅಂದ ಅಧಿಕಾರಿಗಳಿಗೆ ಮತ್ತೆ ನನ್ನ ಮನೆಯಲ್ಲೆ 1 ಗಂಟೆ ತಗೊಂಡ್ರಿ ಎಂದು ಅಸಮಧಾನ ವ್ಯಕ್ತಪಡಿಸಿದರು.
ತಾಳ್ಮೆಯಿಂದ ಮಾಹಿತಿ ಒದಗಿಸಿದರೆ ಮುಂದಿನ ಪೀಳಿಗೆಗೆ ನ್ಯಾಯ ಕೊಟ್ಟಂತೆ ಆಗುತ್ತದೆ. ಸಮೀಕ್ಷೆಯಲ್ಲಿ ಸರಳೀಕರಣ ಮಾಡಬೇಕಿತ್ತು. ಇಂದು ನಾನು ಸಮೀಕ್ಷೆ ಪ್ರತಿ ನೋಡಿದ್ದು, ಬಹಳ ಜಾಸ್ತಿ ಪ್ರಶ್ನೆ ಇದೆ. ಹಾಗಾಗಿ ಅವರಿಗೆ ಕಡಿಮೆ ಕೇಳಿ ಎಂದಿದ್ದೇನೆ. ಯಾರಿಗೂ ತಾಳ್ಮೆ ಇರಲ್ಲ. ಹಳ್ಳಿಯಲ್ಲಿ ಇರುತ್ತೆ ಆದರೆ ನಗರದವರಿಗೆ ಇರಲ್ಲ ಎಂದಿದ್ದಾರೆ.