Sunday, October 12, 2025

ಸೋಮಣ್ಣ ಮನೆಗೆ ಜಾತಿಗಣತಿ ಮಾಡೋಕೆ 9 ಜನ! ಸಚಿವರಿಂದ ಕ್ಲಾಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸಚಿವ ವಿ.ಸೋಮಣ್ಣ ಮನೆಯಲ್ಲಿ ಜಾತಿಗಣತಿ ಸರ್ವೇ ನಡೆಸಲಾಗಿದೆ. ವಿಜಯನಗರದಲ್ಲಿರುವ ಸೋಮಣ್ಣ ಅವರ ನಿವಾಸಕ್ಕೆ ಒಂಬತ್ತು ಸಿಬ್ಬಂದಿ ಆಗಮಿಸಿ ಸರ್ವೇ ನಡೆಸಿದ್ದಾರೆ.

ಸರ್ವೇ ವೇಳೆ ಸಿಬ್ಬಂದಿಗೆ ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಪೂರ್ಣವಾಗಿ ಅಲೈನ್‌ನಲ್ಲೇ ಸರ್ವೇ ಮಾಡೋದ? ಎಂದು ಸೋಮಣ್ಣ ಕೇಳಿದ್ದಾರೆ. ಅದಕ್ಕೆ, ಹೌದು ಅಂತ ಸಿಬ್ಬಂದಿ ತಿಳಿಸಿದ್ದಾರೆ. ಈ ರಾಜ್ಯದಲ್ಲಿ ಎಷ್ಟು ಜನ ಹೆಬ್ಬೆಟ್ಟು ಇದ್ದಾರೆ. ಅವರೆಲ್ಲ ಹೇಗೆ ಅನ್ಲೈನ್‌ನಲ್ಲಿ ಮಾಡಿಸಿಕೊಳ್ಳುತ್ತಾರೆ? ನೀವು ಅಧಿಕಾರಿಗಳು ಸರ್ಕಾರಕ್ಕೆ ಹೇಳಬೇಕಲ್ವಾ ಎಂದು ಗರಂ ಆಗಿದ್ದಾರೆ.

ನಮ್ಮ ಕೇಂದ್ರ ಸರ್ಕಾರ ಮುಂದೆ ಗಣತಿ ಮಾಡಿಸುತ್ತೆ. ಹೇಗೆ ಮಾಡಿಸುತ್ತೆ ನೋಡಿ, ಅದನ್ನು ಸಹ ನೀವೇ ಮಾಡೋದು. ಅಷ್ಟು ಪ್ರಶ್ನೆಗಳು ಬೇಕಾ? ಇದನ್ನೆಲ್ಲಾ ನೀವು ಸರ್ಕಾರಕ್ಕೆ ತಿಳಿಸೋದು ಬೇಡ್ವಾ? ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

error: Content is protected !!