Monday, October 13, 2025

ಬೆಂಗಳೂರಿನಲ್ಲಿ ಅಗ್ನಿ ಅವಘಡ: ಇಡೀ ಏರಿಯಾಗೆ ಆವರಿಸಿದೆ ಹೊಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನ ಏರಿಯಾವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಡೀ ಏರಿಯಾಗೇ ದಟ್ಟ ಹೊಗೆ ಆವರಿಸಿದೆ.
ಅಕ್ಷಯನಗರದಲ್ಲಿರುವ ಸ್ಕ್ರಾಪ್ ಗೋಡೌನ್​​ಗೆ ಬೆಂಕಿ ತಗುಲಿದ್ದು, ಹೊತ್ತಿ ಉರಿದಿದೆ.

ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗಿದೆ. ಕ್ಷಣ ಮಾತ್ರದಲ್ಲೇ ಅಗ್ನಿಯಿಂದ ಬಂದ ಹೊಗೆ ಇಡೀ ಏರಿಯಾವನ್ನೇ ಸುತ್ತುವರೆದಿದೆ. ಗೋಡನ್​​ನಲ್ಲಿ ಇದ್ದ ಹಳೆಯ ಪ್ಲಾಸ್ಟಿಕ್​ ವಸ್ತುಗಳು ಹೊತ್ತಿ ಉರಿದಿದೆ. ಬೆಂಕಿಯ ಹೊಗೆ ಕಂಡು ಸ್ಥಳೀಯರು ಹೆದರಿದ್ದಾರೆ. ತಕ್ಷಣ ಸ್ಥಳಕ್ಕೆ 3 ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ದೌಡಾಯಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ.

error: Content is protected !!