Monday, October 13, 2025

ಪೊಲೀಸರ ಭರ್ಜರಿ ಕಾರ್ಯಾಚರಣೆ: ನಿಯಮ ಉಲ್ಲಂಘನೆ, ಸೂಕ್ತ ದಾಖಲೆಗಳಿಲ್ಲದ 250 ವಾಹನ ಸೀಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಾಕಾ ಚೆಕ್ ಪಾಯಿಂಟ್ ನಿಂದಾಗಿ ನಿಯಮ ಉಲ್ಲಂಘನೆ ಹಾಗೂ ಸೂಕ್ತ ದಾಖಲೆಗಳಿಲ್ಲದ 250 ವಾಹನಗಳ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತಂತೆ ಬೆಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಅಕ್ಟೋಬರ್ 3, 4ರಂದು ಬೆಂಗಳೂರು ನಗರದಾಧ್ಯಂತ ಪ್ರದೇಶ ಆದಿಪತ್ಯ ಕಾರ್ಯಾಚರಣೆ ಹಾಗೂ ನಾಕಾ ಚೆಕ್ ಪಾಯಿಂಟ್ ಗಳ ಕರ್ತವ್ಯಕ್ಕೆ ಸುಮಾರು 1000 ಅಧಿಕಾರಿಗಳು, ಸ್ಸಿಬಂದಿಗಳನ್ನು ನೇಮಿಸಲಾಗಿತ್ತು ಎಂದಿದೆ.

ಎರಡು ದಿನ ವಿಶೇಷ ಕಾರ್ಯಾಚರಣೆ ನಡೆಸಿ ಸುಮಾರು 5000ಕ್ಕೂ ಹೆಚ್ಚು ವಾಹನಗಳ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ನಿಯಮ ಉಲ್ಲಂಘನೆ ಹಾಗೂ ಸೂಕ್ತ ದಾಖಲೆಗಳಿಲ್ಲದ ಕಾರಣ 250 ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಹೇಳಿದೆ.

ಇನ್ನೂ ಈ ಕಾರ್ಯಾಚರಣೆಯಲ್ಲಿ ಒಟ್ಟು 11 ಕಳವು ವಾಹನಗಳನ್ನು ಪತ್ತೆ ಮಾಡಿ, ವಶಕ್ಕೆ ಪಡೆಯಲಾಗಿದೆ. ಅಲ್ಲದೇ ನಾರ್ಕೋಟಿಕ್ಸ್ ಸಂಬಂಧ 16 ಪ್ರಕರಣಗಳನ್ನು ದಾಖಲಿಸಲಾಗಿದೆ.

error: Content is protected !!