ಹೊಸದಿಗಂತ ಡಿಜಿಟಲ್ ಡೆಸ್ಕ್
ಪಶ್ಚಿಮ ಬಂಗಾಳದ ಮಿರಿಕ್ ಮತ್ತು ಡಾರ್ಜಿಲಿಂಗ್ ಬೆಟ್ಟಗಳಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡವರ ಸಂಖ್ಯೆಯೂ ಅಧಿಕವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ತಾಂತ್ರಿಕ ವೈಫಲ್ಯದಿಂದಾಗಿ ಭೂತಾನ್‌ನ ತಾಲಾ ಜಲವಿದ್ಯುತ್ ಅಣೆಕಟ್ಟು ತುಂಬಿ ಹರಿಯಲು ಪ್ರಾರಂಭಿಸಿದ ನಂತರ ಉತ್ತರ ಬಂಗಾಳದಲ್ಲಿ ಪ್ರವಾಹದ ಅಲರ್ಟ್ ಘೋಷಿಸಲಾಗಿದೆ. ನಾಳೆ (ಸೋಮವಾರ) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಡಾರ್ಜಿಲಿಂಗ್ಗೆ ಭೇಟಿ ನೀಡಿ ಸಂತ್ರಸ್ತರ ಜೊತೆ ಮಾತನಾಡಲಿದ್ದಾರೆ.
ದುರ್ಗಾ ಪೂಜೆ ಮತ್ತು ಪೂಜೆಯ ನಂತರದ ಹಬ್ಬಗಳನ್ನು ಆನಂದಿಸಲು ಡಾರ್ಜಿಲಿಂಗ್ ಬೆಟ್ಟಗಳಿಗೆ ಸೇರಿದ್ದ ನೂರಾರು ಪ್ರವಾಸಿಗರು, ಭಾರೀ ಮಳೆಯಿಂದಾಗಿ ಭಾರಿ ಭೂಕುಸಿತ ಸಂಭವಿಸಿದ್ದರಿಂದ ಸಿಲುಕಿಕೊಂಡಿದ್ದಾರೆ. ಸಾಲು ಸಾಲು ರಜೆ ಇದ್ದುದರಿಂದ ಕೋಲ್ಕತ್ತಾ ಮತ್ತು ಬಂಗಾಳದ ಇತರ ಭಾಗಗಳಿಂದ ಹಲವಾರು ಕುಟುಂಬಗಳು ಮಿರಿಕ್, ಘೂಮ್ ಮತ್ತು ಲೆಪ್ಚಜಗತ್‌ನಂತಹ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡಿದ್ದರು. ಆದರೆ ಶನಿವಾರದಿಂದ ಮಳೆ ಸುರಿಯತೊಡಗಿದ್ದರಿಂದ ಅನೇಕ ಪ್ರವಾಸಿಗರು ಅಲ್ಲೇ ಸಿಲುಕಿಕೊಂಡಿದ್ದಾರೆ.