ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಲೋಕದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ತಮ್ಮ ನಿಜವಾದ ಜೀವನ ಶೈಲಿಯೊಂದಿಗೆ ಎಲ್ಲರ ಮನಗೆದ್ದಿದ್ದಾರೆ. ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೂ ಅವರು ಸರಳ ಜೀವನಕ್ಕೆ ಆದ್ಯತೆ ನೀಡುತ್ತಾರೆ ಅನ್ನೋದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ಈ ಹೊಸ ಫೋಟೋಗಳೇ ಸಾಕ್ಷಿ.
‘ಕೂಲಿ’ ಚಿತ್ರದ ಯಶಸ್ಸಿನ ನಂತರ, ರಜನಿಕಾಂತ್ ಅವರು ತಮ್ಮ ಆರಾಧ್ಯ ಸ್ಥಳಗಳಿಗೆ ಭೇಟಿ ನೀಡಿ ಆಧ್ಯಾತ್ಮಿಕ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಉತ್ತರಾಖಾಂಡದ ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ, ಅವರು ತಮ್ಮ ಗುರುಗಳಿಗೆ ನಮನ ಸಲ್ಲಿಸಿದರು. ಗಂಗಾ ನದಿಯ ತೀರದಲ್ಲಿ ಕುಳಿತು ಧ್ಯಾನ ಮಾಡುವ ದೃಶ್ಯವು ಅಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾಗಿದೆ. ನಂತರ ದ್ವಾರಹಾತ್ ಕಡೆಗೆ ಪ್ರಯಾಣಿಸುತ್ತಿರುವ ವೇಳೆ ರಸ್ತೆ ಬದಿಯಲ್ಲಿ ಎಲೆಯ ಪ್ಲೇಟ್‌ನಲ್ಲಿ ಊಟ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಜನಿಕಾಂತ್ ರಿಷಿಕೇಶಕ್ಕೆ ತೆರಳುವುದು ಹೊಸದಲ್ಲ. ‘ಜೈಲರ್’ ಸಿನಿಮಾ ಬಿಡುಗಡೆ ವೇಳೆ ಸಹ ಅವರು ಈ ಭಾಗಕ್ಕೆ ಭೇಟಿ ನೀಡಿ ಧ್ಯಾನ ಮಾಡಿದ್ದರು. ಆ ಸಮಯದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಿತ್ತು.