Sunday, October 12, 2025

ಯಶವಂತಪುರ ಮೆಟ್ರೋ ಸ್ಟೇಷನ್‌ ಅರ್ಧಗಂಟೆ ಬಂದ್‌! ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೋಮವಾರ ಬೆಳಗ್ಗೆ ಯಶವಂತಪುರ ಮೆಟ್ರೋ ಸ್ಟೇಷನ್‌ನಲ್ಲಿ ಉಂಟಾದ ಭಾರೀ ಜನದಟ್ಟಣೆಯಿಂದಾಗಿ ಅರ್ಧಗಂಟೆಗಳ ಕಾಲ ನಿಲ್ದಾಣವನ್ನು ಬಂದ್ ಮಾಡಲಾಗಿತ್ತು.

ಆಯುಧ ಪೂಜೆ, ದಸರಾ ಸೇರಿ ಸಾಲು ಸಾಲು ರಜೆ ಬಳಿಕ ಜನರು ಬೆಂಗಳೂರಿನತ್ತ ಮರಳುತ್ತಿದ್ದು, ಈ ಹಿನ್ನೆಲೆ ಇಂದು ಬೆಳಗ್ಗೆ ಯಶವಂತಪುರ ಮೆಟ್ರೋ ನಿಲ್ದಾಣದ ಬಳಿ ಭಾರೀ ಜನದಟ್ಟಣೆ ಉಂಟಾಗಿತ್ತು. ಹೀಗಾಗಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ದೃಷ್ಟಿಯಿಂದ ಬೆಳಗ್ಗೆ 8:50 ರಿಂದ 9:15ರವರೆಗೆ ನಿಲ್ದಾಣದ ಬಾಗಿಲನ್ನು ಮುಚ್ಚಲಾಗಿತ್ತು.

ಈ ಕುರಿತು ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು, 9:15ರ ಬಳಿಕ ಯಶವಂತಪುರ ಮೆಟ್ರೋ ನಿಲ್ದಾಣದ ಬಾಗಿಲು ತೆರೆಯಲಾಗಿದೆ. ಸದ್ಯ ಎಂದಿನಂತೆ ಮೆಟ್ರೋ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಹೇಳಿದೆ.

error: Content is protected !!