ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶನದ “ಕಾಂತಾರ ಚಾಪ್ಟರ್ 1” ಚಿತ್ರ ಬಾಲಿವುಡ್‌ನಲ್ಲಿ ಗಮನ ಸೆಳೆದಿದ್ದು, ಹಲವು ಹಿರಿಯ ನಟರು ತಮ್ಮ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟ ರಿತೇಶ್ ದೇಶಮುಖ್ ಈ ಚಿತ್ರವನ್ನು ಮೆಚ್ಚಿ, “ಪ್ರತಿ ವಿಭಾಗದಲ್ಲೂ ನೀವು ಮಾಡಿರುವ ಕೆಲಸ ನಿಜಕ್ಕೂ ಅದ್ಭುತವಾಗಿದೆ” ಎಂದು ಟ್ವೀಟ್ ಮೂಲಕ ಕೊಂಡಾಡಿದ್ದಾರೆ.
ಚಿತ್ರದ ಕ್ಯಾಮರಾವರ್ಕ್ ಅರವಿಂದ್ ಕಶ್ಯಪ್ ಅವರಿಂದ ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ. ವಿಸುಯಲ್ ಎಫೆಕ್ಟ್‌ಗಳು (VFX), ಆ್ಯಕ್ಷನ್, ಸೌಂಡ್ ಡಿಸೈನ್, ಪ್ರೊಡಕ್ಷನ್ ಡಿಸೈನ್ ಎಲ್ಲವೂ ಅತ್ಯುತ್ತಮವಾಗಿ ತಯಾರಾಗಿವೆ. ನಾಯಕಿ ರುಕ್ಮಿಣಿ ವಸಂತ್ ಮತ್ತು ನಟ ಗುಲ್ಶನ್ ದೇವಯ್ಯ ಅವರ ಅಭಿನಯ ಕೂಡ ಪ್ರಮುಖ ಮೆಚ್ಚುಗೆಗೆ ಪಾತ್ರವಾಗಿದೆ. ರಿತೇಶ್ ದೇಶಮುಖ್ “ಗುಲ್ಶನ್ ದೇವಯ್ಯ, ನಿಮ್ಮ ದುಷ್ಟತನ ಅಮಲೇರಿಸುವಷ್ಟು ಅದ್ಭುತವಾಗಿದೆ” ಎಂದು ತಿಳಿಸಿದ್ದಾರೆ.
ಸಿನಿಮಾ ತಂಡದ ಶ್ರಮಕ್ಕೂ ಅಭಿನಂದನೆ ಸಲ್ಲಿಸಿದ ಅವರು, ಇಂತಹ ಅದ್ಭುತ ಚಿತ್ರಕ್ಕೆ ಎಲ್ಲರ ಸಹಕಾರ ಅಗತ್ಯವಿತ್ತು ಎಂದು ಹೇಳಿದ್ದಾರೆ. ಬಾಲಿವುಡ್ ನಟರು ಈ ರೀತಿಯಾಗಿ ಕಾಂತಾರ ಚಾಪ್ಟರ್ ಒನ್ ಚಿತ್ರದ ರಚನೆ, ದೃಶ್ಯಾವಳಿ ಮತ್ತು ಅಭಿನಯವನ್ನು ಮೆಚ್ಚಿ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಚಿತ್ರದ ವೈಶಿಷ್ಟ್ಯವನ್ನು ಹಂಚಿದ್ದಾರೆ.